ಬೆಂಗಳೂರು: ನಗರದ ಸ್ಕೇಟಿಂಗ್ ಪಟು ಧನುಷ್ ಬಾಬು ಅವರು ದಕ್ಷಿಣ ಕೊರಿಯಾದಲ್ಲಿ ಈಚೆಗೆ ನಡೆದ 20ನೇ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದರು.
ಅವರು ಪುರುಷರ 200 ಮೀ ಡ್ಯುಯಲ್ ಟೈಮ್ ಟ್ರಯಲ್ಸ್‌ನಲ್ಲಿ ಈ ಸಾಧನೆ ಮಾಡಿದರು. 30 ವರ್ಷದ ಧನುಷ್ ಅವರು 17.592 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ತೈಪೆಯ ಲೀ ಯಾಂಗ್ ಕುವೊ (17.584) ಅವರು ಮೊದಲ ಸ್ಥಾನ ಪಡೆದರು. ಧನುಷ್ ಎರಡನೇಯವರಾಗಿ ಗುರಿ ಮುಟ್ಟಿದರು. ಕೊರಿಯಾದ ಲೀ ಗಿವೊನ್ (17.624ಸೆ) ಕಂಚು ಜಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.