ADVERTISEMENT

ಶೂಟಿಂಗ್‌: ಸೋನಮ್‌ಗೆ ಬೆಳ್ಳಿ

ಪಿಟಿಐ
Published 29 ಜನವರಿ 2024, 16:23 IST
Last Updated 29 ಜನವರಿ 2024, 16:23 IST
ಸೋನಮ್ ಮಸ್ಕರ್
ಸೋನಮ್ ಮಸ್ಕರ್   

ಕೈರೊ: ಭಾರತದ ಸೋನಮ್ ಮಸ್ಕರ್ ಅವರು ಐಎಸ್‌ಎಸ್ಎಫ್ ವಿಶ್ವಕಪ್‌ನ ಮಹಿಳೆಯರ 10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದರು.

ಈಜಿಪ್ಟ್‌ ಇಂಟರ್‌ನ್ಯಾಷನಲ್‌ ಒಲಿಂಪಿಕ್ ಸಿಟಿ ಶೂಟಿಂಗ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ನ ಚೊಚ್ಚಲ ಸ್ಪರ್ಧೆಯಲ್ಲೇ ಸೋನಮ್‌ 251.1 ಪಾಯಿಂಟ್‌ ಸಂಪಾದಿಸಿ ಎರಡನೇ ಸ್ಥಾನ ಪಡೆದರು. ಅವರಿಗಿಂತ 0.9 ಹೆಚ್ಚು ಪಾಯಿಂಟ್‌ ಪಡೆದ ಜರ್ಮನಿಯ ಅನ್ನಾ ಜಾನ್ಸೆನ್‌ ಚಿನ್ನ ಗೆದ್ದರೆ, ಪೋಲೆಂಡ್‌ನ ಅನೆಟಾ ಸ್ಟಾಂಕಿವಿಚ್ ಕಂಚಿನ ಪದಕ ಪಡೆದರು.

ಭಾರತದ ಸೋನಮ್ ಮತ್ತು ನ್ಯಾನ್ಸಿ ಅವರು ಫೈನಲ್‌ನ ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ ಐದು ಮತ್ತು ನಾಲ್ಕನೇ ಸ್ಥಾನ ಪಡೆದಿದ್ದರು. ಫೈನಲ್‌ನಲ್ಲಿ ನ್ಯಾನ್ಸಿ ನಾಲ್ಕನೇ ಸ್ಥಾನ ಪಡೆದರು.

ADVERTISEMENT

ಇದಕ್ಕೂ ಮುನ್ನ ಪುರುಷರ ವಿಭಾಗದಲ್ಲಿ ದಿವ್ಯಾಂಶ್‌ ಸಿಂಗ್ ಪನ್ವಾರ್ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು. ಮೂರು ದಿನಗಳ ಅಂತ್ಯಕ್ಕೆ ಭಾರತವು ಎರಡು ಚಿನ್ನ ಮತ್ತು ಮೂರು ಬೆಳ್ಳಿ ಪದಕಗಳನ್ನು ಗೆದ್ದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.