ADVERTISEMENT

ಸೌರವ್‌ ಕೊಠಾರಿ ರೆವೆಂಟನ್‌ ಮಾಸ್ಟರ್‌

ಪಿಟಿಐ
Published 9 ಡಿಸೆಂಬರ್ 2019, 19:30 IST
Last Updated 9 ಡಿಸೆಂಬರ್ 2019, 19:30 IST
ಸೌರವ್‌ ಕೊಠಾರಿ
ಸೌರವ್‌ ಕೊಠಾರಿ   

ಮೆಲ್ಬರ್ನ್‌:ಭಾರತದ ಸೌರವ್‌ ಕೊಠಾರಿ ಅವರು ರೋಚಕ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ಜೊಲ್‌ ಯಂಗರ್‌ ಅವರನ್ನು ಮಣಿಸಿ ರೆವೆಂಟನ್‌ ಮಾಸ್ಟರ್ಸ್ ಸ್ನೂಕರ್‌ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

11 ಫ್ರೇಮ್‌ಗಳ ಫೈನಲ್‌ ಪಂದ್ಯದಲ್ಲಿ 6–5ರಿಂದ ಸೌರವ್‌ ಜಯದ ನಗೆ ಬೀರಿದರು. ಇದರೊಂದಿಗೆ ಆಸ್ಟ್ರೇಲಿಯಾದ ಬಿಲಿಯರ್ಡ್ಸ್ ಮತ್ತು ಸ್ನೂಕರ್‌ ಸಮಿತಿಯ ಕ್ಯಾಲೆಂಡರ್‌ ವರ್ಷದಲ್ಲಿ ಪ್ರೀಮಿಯರ್‌ ಸ್ನೂಕರ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು. ಆಸ್ಟ್ರೇಲಿಯಾದ ಅಗ್ರ 12 ಕ್ರಮಾಂಕದ ಆಟಗಾರರು ಮಾತ್ರ ಈ ಟೂರ್ನಿಗೆ ಆಹ್ವಾನಿತರಾಗಿದ್ದರು.

ಈ ವರ್ಷದ ಜೂನ್‌ನಲ್ಲಿ ರೆವೆಂಟನ್‌ ಕ್ಲಾಸಿಕ್‌ ಸ್ನೂಕರ್‌ ಟ್ರೋಫಿ ಜಯಿಸಿದ ಹಿನ್ನೆಲೆಯಲ್ಲಿ ಸೌರವ್‌ ಅವರಿಗೆ ವಿಶೇಷ ಆಹ್ವಾನವಿತ್ತು.

ADVERTISEMENT

ಸೆಮಿಫೈನಲ್‌ ಪಂದ್ಯದಲ್ಲಿ ಸೌರವ್‌ ಅವರು ಜೊ ಮಿಂಚಿ ಎದುರು 5–1ರಿಂದ ಗೆದ್ದರೆ, ಯಂಗರ್‌ ಅವರು ಸ್ಟೀವ್‌ ಮಿಫ್‌ಸುದ್‌ ಅವರನ್ನು 5–2ರಿಂದ ಪರಾಭವಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.