ADVERTISEMENT

ಕುಸ್ತಿ: ಫೈನಲ್‌ಗೆ ಸಯ್ಯದ್, ಅಭಿನ್

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 19:34 IST
Last Updated 8 ನವೆಂಬರ್ 2019, 19:34 IST

ಚಿಕ್ಕಮಗಳೂರು: ವಿಜಯಪುರದ ಸಯ್ಯದ್ ಮಹಮ್ಮದ್ ಮತ್ತು ಬೆಂಗಳೂರು ಉತ್ತರ ಜಿಲ್ಲೆಯ ಅಭಿನ್ ಅವರು ಚಿಕ್ಕಮಗಳೂರು ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ರಾಜ್ಯಮಟ್ಟದ ಕುಸ್ತಿ ಟೂರ್ನಿಯ 17 ವರ್ಷದೊಳಗಿನ ಬಾಲಕರ 110 ಕೆ.ಜಿ. ವಿಭಾಗದ ಫೈನಲ್ ತಲುಪಿದ್ದಾರೆ. ಶನಿವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಇಬ್ಬರೂ ಪೈಲ್ವಾನರು ಮುಖಾಮುಖಿಯಾಗಲಿದ್ಧಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಟೂರ್ನಿ ಆಯೋಜಿಸಲಾಗಿದೆ. 14 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರಿಗೆ ಫ್ರೀಸ್ಟೈಲ್‌, 17 ವರ್ಷದೊಳಗಿನ ಬಾಲಕರಿಗೆ ಫ್ರೀಸ್ಟೈಲ್‌ ಮತ್ತು ಗ್ರೀಕೊ ರೋಮನ್‌ ಹಾಗೂ 17 ವರ್ಷದೊಳಗಿನ ಬಾಲಕಿಯರಿಗೆ ಫ್ರೀಸ್ಟೈಲ್‌ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. 24 ಶೈಕ್ಷಣಿಕ ಜಿಲ್ಲೆಗಳ 890 ವಿದ್ಯಾರ್ಥಿಗಳು ಟೂರ್ನಿಯಲ್ಲಿ ಸ್ಪರ್ಧಿಸಿದ್ಧಾರೆ.

ಫೈನಲ್ಸ್‌ ಪ್ರವೇಶಿಸಿರುವವರು
17 ವರ್ಷದೊಳಗಿನ ಬಾಲಕರ ಫ್ರೀಸ್ಟೈಲ್‌ವಿಭಾಗವಾರು
45 ಕೆ.ಜಿ:
ಕಾರ್ತಿಕ್‌ ತಳವಾರ (ಬಾಗಲಕೋಟೆ) ಮತ್ತು ರೋಹನ್‌ ದೊಡ್ಡಳ್ಳಿಸ್‌ (ಉತ್ತರ ಕನ್ನಡ)
48 ಕೆ.ಜಿ: ಟಿ.ಮಲ್ಲಿಕಾರ್ಜುನ (ಧಾರವಾಡ) ಮತ್ತು ಟಿ.ಆದರ್ಶ (ಬಾಗಲಕೋಟೆ)
51 ಕೆ.ಜಿ: ವೈ.ಸುಮಮ್‌ (ಉತ್ತರ ಕನ್ನಡ) ಮತ್ತು ಮಲ್ಲಪ್ಪ (ಧಾರವಾಡ)
55 ಕೆ.ಜಿ: ಮೊಹಮ್ಮದ್‌ ಸಾಹಿಲ್‌ (ಉಡುಪಿ) ಮತ್ತು ಶರತ್‌ (ಧಾರವಾಡ)
60 ಕೆ.ಜಿ: ರಾಮಗೌಡ ಪಾಟೀಲ (ಬೆಳಗಾವಿ) ಮತ್ತು ಸರದಾರ ಪಾಟೀಲ್‌ (ಚಿಕ್ಕೋಡಿ)
65 ಕೆ.ಜಿ: ಬಿ.ಸತೀಶ್‌ (ದಾವಣಗೆರೆ) ಮತ್ತು ಕೆಂಪುಗೌಡ (ಬಾಗಲಕೋಟೆ)
71 ಕೆ.ಜಿ: ವಿನಯ್‌ (ದಾವಣಗೆರೆ) ಮತ್ತು ಬಬ್ಬಾಸಾದ್‌ ಸಿಂಧೆ (ಧಾರವಾಡ)
80 ಕೆ.ಜಿ: ಚಿನ್ಮಯ ಪಾಟೀಲ (ಬೆಳಗಾವಿ) ಮತ್ತು ಕೆ.ಎಸ್‌. ಉಪೇಂದ್ರ (ಬಳ್ಳಾರಿ)
92 ಕೆ.ಜಿ: ಆರ್‌.ಎಂ. ಸುಮಂತ್‌ (ಚಿಕ್ಕೋಡಿ) ಮತ್ತು ಚರಣ್‌ ರೆಡ್ಡಿ (ದಕ್ಷಿಣ ಕನ್ನಡ)
110 ಕೆ.ಜಿ: ಸಯ್ಯದ್‌ ಮಹಮ್ಮದ್‌ (ವಿಜಯಪುರ) ಮತ್ತು ಅಭಿನ್‌ (ಬೆಂಗಳೂರು ಉತ್ತರ)

ADVERTISEMENT

14 ವರ್ಷದೊಳಗಿನ ಬಾಲಕಿಯರ ಫ್ರೀಸ್ಟೈಲ್‌ ವಿಭಾಗವಾರು
30 ಕೆ.ಜಿ:
ಗಂಗೋತ್ರಿ (ಶಿರಸಿ) ಮತ್ತು ರಾಧಿಕಾ ಬಸ್ತವಾಡಕರ್‌ (ಬೆಳಗಾವಿ)
33 ಕೆ.ಜಿ: ತ್ರಿವೇಣಿ ಮುರ್ಕುಂಡಿ (ಗದಗ) ಮತ್ತು ಪೂಜಾ (ಬಾಗಲಕೋಟೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.