ADVERTISEMENT

ಫಿಟ್ ಇಂಡಿಯಾ ಫ್ರೀಡಂ ರನ್‌ ಕಾರ್ಯಕ್ರಮಕ್ಕೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಚಾಲನೆ

ಪಿಟಿಐ
Published 13 ಆಗಸ್ಟ್ 2021, 11:31 IST
Last Updated 13 ಆಗಸ್ಟ್ 2021, 11:31 IST
ನವದೆಹಲಿಯ ಮೇಜರ್ ಧ್ಯಾನ್‌ ಚಂದ್ ಕ್ರೀಡಾಂಗಣದಲ್ಲಿ ಶುಕ್ರವಾರ ‘ಫಿಟ್ ಇಂಡಿಯಾ ಫ್ರೀಡಂ ರನ್‘ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‌ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ಸಿಶಿತ್‌ ಪ್ರಮಾಣಿಕ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು– ಪಿಟಿಐ ಚಿತ್ರ

ನವದೆಹಲಿ: ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಪ್ರಯುಕ್ತ ರಾಷ್ಟ್ರವ್ಯಾಪಿ ನಡೆಯಲಿರುವ ‘ಫಿಟ್‌ ಇಂಡಿಯಾ ಫ್ರೀಡಂ ರನ್‌‘ ಕಾರ್ಯಕ್ರಮದ ಎರಡನೇ ಆವೃತ್ತಿಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‌ ಶುಕ್ರವಾರ ಚಾಲನೆ ನೀಡಿದರು.

ಆಗಸ್ಟ್‌ 15ರಂದು ಆರಂಭವಾಗುವ ಈ ಅಭಿಯಾನವು ಅಕ್ಟೋಬರ್‌ ಎರಡರವರೆಗೆ ನಡೆಯಲಿದೆ. ಇಲ್ಲಿಯ ಮೇಜರ್‌ ಧ್ಯಾನ್‌ಚಂದ್‌ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಲಾಯಿತು.

‘ದೇಶದ 75 ಪ್ರಮುಖ ತಾಣಗಳಲ್ಲಿ ‘ಫ್ರೀಡಂ ರನ್‌‘ ಆಯೋಜಿಸಲಾಗುತ್ತದೆ. ಕನಿಷ್ಠ 750 ಜಿಲ್ಲೆಗಳಿಗೆ ಈ ಅಭಿಯಾನವನ್ನು ಕೊಂಡೊಯ್ದು 7.50 ಕೋಟಿಗಿಂತ ಅಧಿಯ ಯುವಕರು ಮತ್ತು ನಾಗರಿಕರನ್ನು ತಲುಪುವ ಗುರಿಯಿಟ್ಟುಕೊಂಡಿದ್ದೇವೆ‘ ಎಂದು ಠಾಕೂರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.