ADVERTISEMENT

ಸಾಯ್‌ಗೆ ಹೊಸ ಲಾಂಛನ

ಪಿಟಿಐ
Published 30 ಸೆಪ್ಟೆಂಬರ್ 2020, 16:14 IST
Last Updated 30 ಸೆಪ್ಟೆಂಬರ್ 2020, 16:14 IST
ನವದೆಹಲಿಯ ಮೇಜರ್ ಧ್ಯಾನಚಂದ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಭಾರತ ಕ್ರೀಡಾ ಪ್ರಾಧಿಕಾರದ ನೂತನ ಲಾಂಛನವನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅನಾವರಣಗೊಳಿಸಿದರು  –ಪಿಟಿಐ ಚಿತ್ರ
ನವದೆಹಲಿಯ ಮೇಜರ್ ಧ್ಯಾನಚಂದ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಭಾರತ ಕ್ರೀಡಾ ಪ್ರಾಧಿಕಾರದ ನೂತನ ಲಾಂಛನವನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅನಾವರಣಗೊಳಿಸಿದರು  –ಪಿಟಿಐ ಚಿತ್ರ   

ನವದೆಹಲಿ: ಭಾರತ ಕ್ರೀಡಾ ಪ್ರಾಧಿಕಾರದ ನೂತನ ಲಾಂಛನವನ್ನು ಬುಧವಾರ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅನಾವರಣಗೊಳಿಸಿದರು.

1982ರ ನಂತರ ಇದೇ ಮೊದಲ ಬಾರಿಗೆ ಲಾಂಛನವನ್ನು ಬದಲಾವಣೆ ಮಾಡಲಾಗಿದೆ. ಹೊಸ ಲಾಂಛನದಲ್ಲಿ ಎಸ್‌.ಎ.ಐ ಇಂಗ್ಲಿಷ್ ಅಕ್ಷರಗಳು ದೊಡ್ಡದಾಗಿ ಕಾಣುತ್ತವೆ. ಅದರ ಮೇಲೊಂದು ಅಥ್ಲೀಟ್ ವಿಮಾನದ ಚಿತ್ರವಿದೆ. ಇದು ಎತ್ತರದ ಸಾಧನೆಯತ್ತ ಚಲಿಸುತ್ತಿರುವ ದ್ಯೋತಕವಾಗಿದೆ.

ನವದೆಹಲಿಯ ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಲಾಂಛನ ಅನಾವರಣ ನಡೆಯಿತು.

ADVERTISEMENT

‘ನೂತನ ಲೊಗೊ ಪುಟ್ಟದಾಗಿದೆ. ಆದರೆ ಅದು ನೀಡುತ್ತಿರುವ ಸಂದೇಶವು ಬಹಳ ದೊಡ್ಡದು. ಹಳೆಯ ಲೋಗೊಗಿಂತ ಆಕರ್ಷಕವಾಗಿದೆ’ ಎಂದು ಸಚಿವ ರಿಜಿಜು ಹೇಳಿದರು.

ಕ್ರೀಡಾ ಕಾರ್ಯದರ್ಶಿ ರವಿ ಮಿತ್ತಲ್, ಸಾಯ್ ಮಹಾನಿರ್ದೇಶಕ ಸಂದೀಪ್ ಪ್ರಧಾನ್ ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ನರೀಂದರ್ ಭಾತ್ರಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.