ADVERTISEMENT

ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಪ್ರದಾನ 31ಕ್ಕೆ

ಪಿಟಿಐ
Published 26 ಮಾರ್ಚ್ 2024, 13:19 IST
Last Updated 26 ಮಾರ್ಚ್ 2024, 13:19 IST
ಹಾಕಿ ಇಂಡಿಯಾ ಲೋಗೊ
ಹಾಕಿ ಇಂಡಿಯಾ ಲೋಗೊ   

ನವದೆಹಲಿ: ಹಿರಿಯ ಗೋಲ್‌ಕೀಪರ್‌ಗಳಾದ ಪಿ.ಆರ್.ಶ್ರೀಜೇಶ್ ಮತ್ತು ಸವಿತಾ ಪೂನಿಯಾ ಅವರು ಕ್ರಮವಾಗಿ ಹಾಕಿ ಇಂಡಿಯಾದ  ‘ವರ್ಷದ ಆಟಗಾರ’, ವರ್ಷದ ಆಟಗಾರ್ತಿ ‍ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ನಾಮನಿರ್ದೇಶನ ಮಂಗಳವಾರ ಆರಂಭವಾಗಿದ್ದು, ಇದೇ 31ರಂದು ಪ್ರಶಸ್ತಿ ಪ್ರದಾನ ಸಮಾರಂಭ ಇಲ್ಲಿ ನಡೆಯಲಿದೆ.

ಮಾಜಿ ನಾಯಕ ಶ್ರೀಜೇಶ್ ಮತ್ತು ಅನುಭವಿ ಆಟಗಾರ್ತಿ ಪೂನಿಯಾ ಸ್ಥಿರ ಪ್ರದರ್ಶನ ನೀಡುತ್ತಿದ್ದು, ‘ವರ್ಷದ ಗೋಲ್‌ಕೀಪರ್‌’ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿದ್ದಾರೆ.

‌ಭಾರತ ಪುರುಷರ ತಂಡದ ಕಪ್ತಾನ ಹರ್ಮನ್‌ಪ್ರೀತ್ ಸಿಂಗ್ ಅವರು ಎರಡು ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ‘ವರ್ಷದ ಆಟಗಾರ’ ಜೊತೆಗೆ ‘ವರ್ಷದ ರಕ್ಷಣಾ ಆಟಗಾರ’ ಗೌರವಕ್ಕೆ ರೇಸ್‌ನಲ್ಲಿದ್ದಾರೆ.

ADVERTISEMENT

ವರ್ಷದ ಆಟಗಾರ ಪ್ರಶಸ್ತಿ ₹25 ಲಕ್ಷ ಬಹುಮಾನ ಹೊಂದಿದೆ. ಗೋಲ್‌ಕೀಪಿಂಗ್ ಟ್ರೋಫಿ ಗೆದ್ದವರಿಗೆ ₹5 ಲಕ್ಷ ಜೇಬಿಗಿಳಿಯಲಿದೆ.

ಎಂಟು ವಿಭಾಗಗಳಲ್ಲಿ 32 ನಾಮನಿರ್ದೇಶಗಳನ್ನು ಪಟ್ಟಿ ಮಾಡಲಾಗಿದ್ದು, ಒಟ್ಟಾರೆ ಬಹುಮಾನ ಮೊತ್ತ ₹7.56 ಕೋಟಿ ಇದೆ ಎಂದಜು ಹಾಖಿ ಇಂಡಿಯಾ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.