ADVERTISEMENT

ಸ್ಟಾರ್ ಸ್ಪೋರ್ಟ್ಸ್‌ ಕನ್ನಡ ವಾಹಿನಿಗೆ ಚಾಲನೆ 29ರಂದು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 18:42 IST
Last Updated 28 ಡಿಸೆಂಬರ್ 2018, 18:42 IST
   

ಬೆಂಗಳೂರು: ಆಟೋಟ ಲೋಕದ ದರ್ಶನ ಮಾಡಿಸುವ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ ಇನ್ನುಮುಂದೆ ಕನ್ನಡದಲ್ಲೂ ಪ್ರಸಾರ ಸೇವೆ ನೀಡಲಿದೆ.

ನಗರದ ಒರಾಯನ್ ಮಾಲ್‌ನಲ್ಲಿ ಡಿ.29ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಚಿತ್ರನಟ ಉಪೇಂದ್ರ ಅವರು ‘ಸ್ಟಾರ್ ಸ್ಪೋರ್ಟ್ಸ್‌ ಕನ್ನಡ’ ವಾಹಿನಿಗೆ ಚಾಲನೆ ನೀಡಲಿದ್ದಾರೆ. ಸಂಜೆ 6ರಿಂದ ಆರಂಭವಾಗುವ ವಾಹಿನಿಯ ಚಾಲನಾ ಕಾರ್ಯಕ್ರಮದಲ್ಲಿ ಗಾಯಕ ರಘು ದಿಕ್ಷಿತ್ ಸಂಗೀತದ ರಸಸ್ವಾದ ಉಣಬಡಿಸಲಿದ್ದಾರೆ. ಕಲಾವಿದರಾದ ವಿಲಾಸ್ ನಾಯಕ್‌ ಅವರು ಕನ್ನಡ ನಾಡಿನ ಕ್ರೀಡೆಗಳ ಕುರಿತ ಚಿತ್ರಗಳನ್ನು ವೇಗವಾಗಿ ರಚಿಸಿ, ರಂಜಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT