
ಬ್ಯಾಸ್ಕೆಟ್‌ಬಾಲ್
ಬೆಂಗಳೂರು: ಸಂಘಟಿತ ಆಟ ಆಡಿದ ಯಂಗ್ ಓರಿಯನ್ಸ್ ಸ್ಪೋರ್ಟ್ಸ್ ಕ್ಲಬ್ ತಂಡವು ‘ಸ್ಟೇಟ್ ಅಸೋಸಿಯೇಶನ್ ಕಪ್’ಗಾಗಿ ನಡೆಯುತ್ತಿರುವ ರಾಜ್ಯ ಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಎಂಟರ ಘಟ್ಟ ಪ್ರವೇಶಿಸಿತು.
ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ನಡೆದ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಯಂಗ್ ಓರಿಯನ್ಸ್ ತಂಡವು 100–65ರಿಂದ ಚಿಕ್ಕಮಗಳೂರು ಜಿಲ್ಲಾ ತಂಡವನ್ನು ಸುಲಭವಾಗಿ ಮಣಿಸಿತು. ಸುಮಂತ್ (23 ಪಾಯಿಂಟ್ಸ್) ಹಾಗೂ ಶಶಾಂಕ್ (19 ಪಾಯಿಂಟ್ಸ್) ಅವರು ಓರಿಯನ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪ್ರಿಕ್ವಾರ್ಟರ್ ಸುತ್ತಿನ ಇತರೆ ಪಂದ್ಯಗಳಲ್ಲಿ ಡಿವೈಇಎಸ್ ಬೆಂಗಳೂರು ತಂಡ 93–55ರಿಂದ ಬೆಂಗಳೂರು ವ್ಯಾನ್‌ಗಾರ್ಡ್ಸ್ ವಿರುದ್ಧ; ಬ್ಯಾಂಕ್ ಆಫ್ ಬರೋಡಾ ತಂಡ 76–41ರಿಂದ ಸಹಕಾರನಗರ ಬಿ.ಸಿ. ವಿರುದ್ಧ; ಸದರ್ನ್ ಬ್ಲ್ಯೂಸ್ ತಂಡ 78–59ರಿಂದ ಜೆಎಸ್‌ಸಿ ವಿರುದ್ಧ; ಎಂಎನ್‌ಕೆ ರಾವ್ ಪಾರ್ಕ್ ಬಿ.ಸಿ. ತಂಡ 70–62ರಿಂದ ದೇವಾಂಗ ಯೂನಿಯನ್ ವಿರುದ್ಧ; ವಿವೇಕ್ಸ್ ಸ್ಪೋರ್ಟ್ಸ್ ಕ್ಲಬ್ ತಂಡ 74–54 ರಿಂದ ಹೂಪ್ಸ್ ಬಿ.ಸಿ. ವಿರುದ್ಧ; ಬೀಗಲ್ಸ್ ಬಿ.ಸಿ. ತಂಡ 77–74ರಿಂದ ಬಿಸಿವೈಎ ವಿರುದ್ಧ ಹಾಗೂ ಜಿಎಸ್‌ಟಿ ಆ್ಯಂಡ್ ಕಸ್ಟಮ್ಸ್ 80–62ರಿಂದ ರಾಜಮಹಲ್ ಬಿ.ಸಿ. ತಂಡದ ವಿರುದ್ಧ ಜಯ ಸಾಧಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.