ADVERTISEMENT

ಬ್ಯಾಸ್ಕೆಟ್‌ಬಾಲ್‌: ಸಹಕಾರನಗರ ಬಿ.ಸಿ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 19:50 IST
Last Updated 24 ನವೆಂಬರ್ 2025, 19:50 IST
<div class="paragraphs"><p>ಬ್ಯಾಸ್ಕೆಟ್‌ಬಾಲ್‌</p></div>

ಬ್ಯಾಸ್ಕೆಟ್‌ಬಾಲ್‌

   

ಬೆಂಗಳೂರು: ಸಂಘಟಿತ ಪ್ರದರ್ಶನ ನೀಡಿದ ಸಹಕಾರನಗರ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡವು ‘ಸ್ಟೇಟ್‌ ಅಸೋಸಿಯೇಶನ್‌ ಕಪ್‌’ಗಾಗಿ ನಡೆಯುತ್ತಿರುವ ರಾಜ್ಯ ಮಟ್ಟದ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಸೋಮವಾರ 60–56ರಿಂದ ಯಂಗ್‌ ಬುಲ್ಸ್‌ ಬಿ.ಸಿ ತಂಡವನ್ನು ರೋಚಕವಾಗಿ ಮಣಿಸಿತು.

ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್‌ ಕೋರ್ಟ್‌ನಲ್ಲಿ ನಡೆದ ಲೀಗ್‌ ಹಂತದ ಪಂದ್ಯದಲ್ಲಿ ಮೊದಲಾರ್ಧದಲ್ಲಿ 4 ಅಂಕಗಳ (31–27) ಅಲ್ಪ ಮುನ್ನಡೆ ಪಡೆದಿದ್ದ ಸಹಕಾರನಗರ ತಂಡಕ್ಕೆ ದ್ವಿತೀಯಾರ್ಧದಲ್ಲಿ ಸಮಬಲದ ಪೈಪೋಟಿ ಎದುರಾಯಿತು. ಆದರೂ, ಅಷ್ಟೇ ಅಂಕಗಳಿಂದ (4) ಗೆಲುವು ತನ್ನದಾಗಿಸಿಕೊಳ್ಳುವಲ್ಲಿ ಸಹಕಾರನಗರ ತಂಡದ ಆಟಗಾರರು ಯಶಸ್ವಿಯಾದರು.

ADVERTISEMENT

ಫಲಿತಾಂಶಗಳು: ಪುರುಷರು: ಎಂಸಿಎಚ್‌ಎಸ್‌ ತಂಡ 63–21ರಿಂದ ಸಿಜೆಸಿ ತಂಡದ ವಿರುದ್ಧ; ಬಿಸಿವೈಎ ತಂಡ 66–51ರಿಂದ ಯಲಹಂಕ ನ್ಯೂ ಟೌನ್‌ ತಂಡದ ವಿರುದ್ಧ; ಸಹಕಾರನಗರ ಬಿ.ಸಿ. ತಂಡ 69–38ರಿಂದ ಯಂಗ್‌ಬುಲ್ಸ್‌ ಬಿ.ಸಿ. ವಿರುದ್ಧ; ವಿವೇಕ್ಸ್‌ ಸ್ಪೋರ್ಟ್ಸ್ ಕ್ಲಬ್‌ ತಂಡ 67–37ರಿಂದ ಅಪ್ಪಯ್ಯ ಬಿ.ಸಿ. ವಿರುದ್ಧ; ಬೀಗಲ್ಸ್‌ ಬಿ.ಸಿ. ತಂಡ 73–47ರಿಂದ ಹೆಬ್ಬಾಳ ಬಿ.ಸಿ. ವಿರುದ್ಧ; ಬೆಂಗಳೂರು ವ್ಯಾನ್‌ಗಾರ್ಡ್ಸ್‌ 59–42ರಿಂದ ಪಟ್ಟಾಭಿರಾಮಯ್ಯ ಬಿ.ಸಿ. ವಿರುದ್ಧ; ಸಿನ್ಸಿನಾಟೀಸ್‌ ಬಿ.ಸಿ. 87–51ರಿಂದ ಎಸ್‌ಬಿಐ ವಿರುದ್ಧ ಹಾಗೂ ಎಂಎನ್‌ಕೆ ರಾವ್‌ ಪಾರ್ಕ್‌ ಬಿ.ಸಿ. ತಂಡವು 74–69ರಿಂದ ಭಾರತ್‌ ಸ್ಪೋರ್ಟ್ಸ್‌ ಯೂನಿಯನ್‌ ವಿರುದ್ಧ ಜಯ ಸಾಧಿಸಿದವು.

ಮಹಿಳೆಯರು: ನೈಋತ್ಯ ರೈಲ್ವೆ ತಂಡ 79–18ರಿಂದ ವಿಮಾನಪುರ ಸ್ಪೋರ್ಟ್ಸ್‌ ಕ್ಲಬ್‌ ವಿರುದ್ಧ; ಮೈಸೂರು ಜಿಲ್ಲೆ ‘ಎ’ ತಂಡ 65–20ರಿಂದ ಬೆಂಗಳೂರು ಸ್ಪೋರ್ಟಿಂಗ್‌ ವಿರುದ್ಧ; ಬೀಗಲ್ಸ್‌ ಬಿ.ಸಿ. ತಂಡವು 44–25ರಿಂದ ಸಿಜೆಸಿ ವಿರುದ್ಧ; ರಾಜಮಹಲ್‌ ಬಿ.ಸಿ. ತಂಡವು 67–32ರಿಂದ ವಿಜಯಪುರ ಜಿಲ್ಲಾ ತಂಡದ ವಿರುದ್ಧ ಹಾಗೂ ಮೌಂಟ್ಸ್‌ ಕ್ಲಬ್‌ ತಂಡವು 49–45ರಿಂದ ಬೆಂಗಳೂರು ವ್ಯಾನ್‌ಗಾರ್ಡ್ಸ್‌ ತಂಡದ ವಿರುದ್ಧ ಗೆಲುವು ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.