ADVERTISEMENT

ಬ್ಯಾಸ್ಕೆಟ್‌ಬಾಲ್‌: ಎಂಇಜಿ, ಬಾಶ್ ತಂಡಗಳಿಗೆ ಜಯ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 19:45 IST
Last Updated 20 ಡಿಸೆಂಬರ್ 2021, 19:45 IST

ಬೆಂಗಳೂರು: ಎಂಇಜಿ ಮತ್ತು ಬಾಶ್ ತಂಡಗಳು ರಾಜ್ಯ ಅಸೋಸಿಯೇಷನ್‌ ಕಪ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಬೋನಿ ರಾಯ್ ಗಳಿಸಿದ 21 ಪಾಯಿಂಟ್ಸ್ ನೆರವಿನಿಂದ ಎಂಇಜಿ 50–24ರಿಂದ ಸಿಜೆಸಿ ತಂಡವನ್ನು ಪರಾಭವಗೊಳಿಸಿತು. ಮತ್ತೊಂದು ಪಂದ್ಯದಲ್ಲಿ ಬಾಶ್‌ 61–40ರಿಂದ ರಾಜ್‌ಮಹಲ್ ಬಿ.ಸಿ. ತಂಡಕ್ಕೆ ಸೋಲುಣಿಸಿತು. ವಿಜೇತ ತಂಡದ ಶ್ರೇಯಸ್‌ 34 ಪಾಯಿಂಟ್ಸ್ ದಾಖಲಿಸಿದರು. ಇನ್ನುಳಿದ ಪಂದ್ಯಗಳಲ್ಲಿ ವಿಮಾನಪುರ ಎಸ್‌ಸಿ 60–52ರಿಂದ ಬೆಂಗಳೂರು ಸ್ಪೋರ್ಟಿಂಗ್ ಎದುರು, ಬಿ.ಸಿ ಬಿ.ಸಿ 53–52ರಿಂದ ಕೋರಮಂಗಲ ಎಸ್‌ಸಿ ವಿರುದ್ಧ, ಎಸ್‌. ಬ್ಲ್ಯೂಸ್ 68–34ರಿಂದ ಹಲಸೂರು ಎಸ್‌ಸಿ ಎದುರು, ಡಿವೈಇಎಸ್ ಬೆಂಗಳೂರು 74– 67ರಿಂದ ಸಿಎಂಪಿ ಎದುರು, ವೈಎಂಎಂಎ 83– 42ರಿಂದ ಅಪ್ಪಯ್ಯ ಬಿ.ಸಿ ವಿರುದ್ಧ ಜಯ ಸಾಧಿಸಿದವು.

ಬೀಗಲ್ಸ್ ಬಿ.ಸಿ 68–47ರಿಂದ ಡಿಆರ್‌ಡಿಒ ವಿರುದ್ಧ, ರಾಜ್‌ಕುಮಾರ್ ಬಿ.ಸಿ 63–62ರಿಂದ ಶಂಕರನಗರ ಬಿ.ಸಿ ಎದುರು, ರೋವರ್ಸ್ ಧಾರವಾಡ 49–47ರಿಂದ ಸ್ಟಾರ್‌ ಚಾಲೆಂಜರ್ಸ್ ಮೈಸೂರು ವಿರುದ್ಧ, ಜಿಎಸ್‌ಟಿ ಆ್ಯಂಡ್‌ ಕಸ್ಟಮ್ಸ್ 72– 52ರಿಂದ ಎಂ.ಎನ್‌.ಕೆ. ರಾವ್ ಪಾರ್ಕ್‌ ತಂಡದ ವಿರುದ್ಧ ಗೆಲುವು ಸಾಧಿಸಿದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.