ಬೆಂಗಳೂರು: ರಂಜಿತ್ ಚಂದ್ ಗಳಿಸಿದ ನಾಲ್ಕು ಗೋಲುಗಳ ಬಲದಿಂದ ಗುರು ಹಾಕಿ ಕ್ಲಬ್ ತಂಡವು ಕೆಎಸ್‌ಎಚ್‌ಎ ಎ ಡಿವಿಷನ್ ಹಾಕಿ ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸಿತು.
ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಗುರು ಕ್ಲಬ್ 7–2ರಿಂದ ಎಚ್‌ಎಂಟಿ ತಂಡವನ್ನು ಪರಾಭವಗೊಳಿಸಿತು. ವಿಜೇತ ತಂಡದ ಪರ ಗಂಗಾಧರ್ ರೆಡ್ಡಿ 4ನೇ ನಿಮಿಷ, ರಂಜಿತ್ 8, 31, 37 ಮತ್ತು 50ನೇ ನಿಮಿಷಗಳಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಮಹೇಶ್ ರೆಡ್ಡಿ (33ನೇ ನಿ.) ಮತ್ತು ರಾಮ್‌ಕುಮಾರ್ (40ನೇ ನಿ.) ತಲಾ ಒಂದು ಗೋಲು ದಾಖಲಿಸಿದರು. ಎಚ್‌ಎಂಟಿ ಪರ ತೇಸ್ವಿನ್ (35ನೇ ನಿ.) ಮತ್ತು ಅಖಿಲ್ (44ನೇ ನಿ.) ಗೋಲು ಹೊಡೆದರು.
ಇನ್ನೊಂದು ಪಂದ್ಯದಲ್ಲಿ ಕರ್ನಾಟಕ ಅರಣ್ಯ ಇಲಾಖೆ ತಂಡವು 5–1ರಿಂದ ಯಂಗ್‌ಸ್ಟಾರ್ ಕ್ಲಬ್, ರಾಯಚೂರು ಎದುರು ಗೆದ್ದಿತು.
ಎ ಡಿವಿಷನ್ ಪಂದ್ಯಗಳು ಮಂಗಳವಾರ ಮುಕ್ತಾಯವಾಗಿದ್ದು, ಕರ್ನಾಟಕ ಅರಣ್ಯ ಇಲಾಖೆ ತಂಡವು ಮೊದಲ ಸ್ಥಾನ ಗಳಿಸಿತು. ಯಂಗ್‌ಸ್ಟಾರ್ ಎರಡು ಮತ್ತು ಗುರು ಕ್ಲಬ್ ಮೂರನೇ ಸ್ಥಾನ ಪಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.