ಆನೇಕಲ್ : ಇಲ್ಲಿನ ಪಟ್ಟಣದ ಎಎಸ್‌ಬಿ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರಿನ ಹೆಸರಘಟ್ಟ ತಂಡವನ್ನು ಮಣಿಸಿದ ಬೆಂಗಳೂರಿನ ರಾಯಲ್ಸ್ ತಂಡ ಜಯ ಸಾಧಿಸಿ, ₹1 ಲಕ್ಷ ನಗದು ಮತ್ತು ಟ್ರೋಪಿಯನ್ನು ತನ್ನಾಗಿಸಿಕೊಂಡಿತು.
ಬಿ.ಶಿವಣ್ಣ ಅಭಿಮಾನಿಗಳ ಬಳಗ, ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮತ್ತು ಬೆಂಗಳೂರು ನಗರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮೂರು ದಿನ ಕಬಡ್ಡಿ ಪಂದ್ಯಾವಳಿಯಲ್ಲಿ ಆಯೋಜಿಸಿತು. ಮಂಡ್ಯ, ಕೋಲಾರ, ನೆಲಮಂಗಲ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 35 ತಂಡಗಳು ಭಾಗವಹಿಸಿದ್ದವು.
ಭಾನುವಾರ ರಾತ್ರಿ ಬೆಂಗಳೂರಿನ ರಾಯಲ್ಸ್ ತಂಡ ಮತ್ತು ಹೆಸರಘಟ್ಟ ತಂಡ ಪೈನಲ್‌ನಲ್ಲಿ ಸೆಣಸಿದವು.
ವಿಜೇತ ತಂಡಕ್ಕೆ ₹1ಲಕ್ಷ ನಗದು, ಟ್ರೋಪಿ, ರನ್ನರ್ಸ್‌ಅಪ್ ತಂಡಕ್ಕೆ ₹75 ಸಾವಿರ, ಟ್ರೋಪಿ, ಮೂರನೇ ಸ್ಥಾನ ಪಡೆದ ಆನೇಕಲ್ ತಂಡಕ್ಕೆ ₹25 ಸಾವಿರ ನಗದು ಟ್ರೋಪಿ, ನಾಲ್ಕನೇ ಸ್ಥಾನ ಪಡೆದ ನೆಲಮಂಗಲ ಶ್ರೀಸಾಯಿ ತಂಡಕ್ಕೆ ಟ್ರೋಪಿ ನೀಡಲಾಯಿತು.
ತಾಲ್ಲೂಕು ಮಟ್ಟದ ಮಹಿಳಾ ಕಬಡ್ಡಿ ಪಂದ್ಯದಲ್ಲಿ ಹೊಸರೋಡ್ ತಂಡವನ್ನು ಸೋಲಿಸಿ ಆನೇಕಲ್ ತಂಡ ಜಯ ಸಾಧಿಸಿತು. ವಿಜೇತ ತಂಡಕ್ಕೆ ಟ್ರೋಪಿ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಪುರುಷರ ತಾಲ್ಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಆನೇಕಲ್ ತಂಡ ಪ್ರಥಮ ಸ್ಥಾನ ಪಡೆಯಿತು.
Cut-off box - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.