ADVERTISEMENT

ದಾವಣಗೆರೆ, ಮೈಸೂರು ತಂಡಗಳು ಚಾಂಪಿಯನ್‌

ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕೊಕ್ಕೊ ಟೂರ್ನಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 20:04 IST
Last Updated 19 ನವೆಂಬರ್ 2018, 20:04 IST
ದಾವಣಗೆರೆಯಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕೊಕ್ಕೊ ಟೂರ್ನಿಯಲ್ಲಿ ಪ್ರಶಸ್ತಿ ವಿಜೇತ ದಾವಣಗೆರೆ ಜಿಲ್ಲೆಯ ಪುರುಷರ ತಂಡ (ನಿಂತವರು: ಆರ್‌. ನೇಸರ, ಬಿ.ಕೆ. ಹಾಲೇಶ್‌, ಮಂಜುನಾಥ, ಕರಿಬಸವರಾಜ್‌, ಎ. ಶಂಕರ, ಪುನೀತ್‌ಕುಮಾರ್‌, ರಾಜ್‌, ಗಾಂಧಿ, ದಾದಾಪೀರ್‌, ಮಾರಪ್ಪ, ಕಾರ್ತಿಕ್‌ ಸ್ವಾಮಿ, ಜೆ.ಜಿ. ಶರತ್‌) ಹಾಗೂ ಮೈಸೂರು ಜಿಲ್ಲೆಯ ಮಹಿಳೆಯರ ತಂಡ (ಮಂಡಿಯೂರಿ ಕುಳಿತವರು: ಶರಣ್ಯಾ, ಎಸ್‌. ವಿನುತಾ, ಪಿ. ತುಳಸಿ, ಕೆ.ವಿ. ಸಂಗೀತಾ, ಬಿ. ಚೈತ್ರಾ, ಕೆ.ಆರ್‌. ತೇಜಸ್ವಿನಿ, ಟಿ. ಕವನಾ, ಎನ್‌. ಶ್ರಾವಣ, ಎಂ. ಕೃತಿಕಾ, ಎಂ.ಸಿ. ರೋಜಾ, ಆರ್‌. ನವ್ಯಾ, ಬಿ.ಎಸ್‌. ಕೀರ್ತನಾ) ಟ್ರೋಫಿಯೊಂದಿಗೆ. –ಪ್ರಜಾವಾಣಿ ಚಿತ್ರ/ಅನೂಪ್‌ ಆರ್‌. ತಿಪ್ಪೇಸ್ವಾಮಿ

ದಾವಣಗೆರೆ: ಆತಿಥೇಯ ದಾವಣಗೆರೆ ಹಾಗೂ ಮೈಸೂರು ಜಿಲ್ಲಾ ತಂಡಗಳು ಸೋಮವಾರ ಇಲ್ಲಿ ಮುಕ್ತಾಯಗೊಂಡ ಪದವಿಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಕೊಕ್ಕೊ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದ ಚಾಂಪಿಯನ್‌ ಆದವು.

ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಜಿಲ್ಲಾ
ಕ್ರೀಡಾಂಗಣದಲ್ಲಿ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ದಕ್ಷಿಣ ಕನ್ನಡ ತಂಡದ ವಿರುದ್ಧ ದಾವಣಗೆರೆ ಗೆದ್ದಿತು.

ಮಹಿಳೆಯರ ವಿಭಾಗದ ಫೈನಲ್ ಪಂದ್ಯದಲ್ಲಿ ಮೈಸೂರು ತಂಡ 5–4ರಲ್ಲಿ ದಕ್ಷಿಣ ಕನ್ನಡ ತಂಡವನ್ನು ಮಣಿಸಿತು. ಬಹುಮಾನ: ಪುರುಷರ ವಿಭಾಗದಲ್ಲಿ ದಾವಣಗೆರೆಯ ಶಂಕರ್‌ ಉತ್ತಮ ಚೇಸರ್‌, ದಕ್ಷಿಣ ಕನ್ನಡದ ಮರಿಯಪ್ಪ ಉತ್ತಮ ಡಿಫೆಂಡರ್‌ ಪ್ರಶಸ್ತಿ ಪಡೆದರು. ಮಹಿಳೆಯರ ವಿಭಾಗದಲ್ಲಿ ದಕ್ಷಿಣ ಕನ್ನಡದ ಸುಮಿತ್ರಾ ಉತ್ತಮ ಚೇಸರ್‌, ಮೈಸೂರಿನ ಚೈತ್ರಾ ಉತ್ತಮ ಡಿಫೆಂಡರ್‌ ಪ್ರಶಸ್ತಿ ಗಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.