ADVERTISEMENT

ಮಿನಿ ಗೇಮ್ಸ್‌: ಎಂಸಿಎಚ್‌ಎಸ್‌ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 18:15 IST
Last Updated 8 ನವೆಂಬರ್ 2025, 18:15 IST
ಬಾಲಕಿಯರ ಬ್ಯಾಸ್ಕೆಟ್‌ಬಾಲ್‌ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಂಡ ಬೀಗಲ್ಸ್‌ ಬಿ.ಸಿ. ತಂಡದ ಆಟಗಾರ್ತಿಯರು
ಬಾಲಕಿಯರ ಬ್ಯಾಸ್ಕೆಟ್‌ಬಾಲ್‌ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಂಡ ಬೀಗಲ್ಸ್‌ ಬಿ.ಸಿ. ತಂಡದ ಆಟಗಾರ್ತಿಯರು   

ಬೆಂಗಳೂರು: ಮೈಸೂರಿನ ಎಂಸಿಎಚ್ಎಸ್ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡವು ಇಲ್ಲಿ ನಡೆಯುತ್ತಿರುವ ‘ರಾಜ್ಯ ಮಿನಿ ಗೇಮ್ಸ್‌’ನ ಬಾಲಕರ ಬ್ಯಾಸ್ಕೆಟ್‌ಬಾಲ್‌ ಸ್ಪರ್ಧೆಯಲ್ಲಿ ಸದರ್ನ್‌ ಬ್ಲ್ಯೂಸ್‌ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಬೀಗಲ್ಸ್‌ ಬ್ಯಾಸ್ಕೆಟ್‌ಬಾಲ್‌ ತಂಡವು ಚಾಂಪಿಯನ್‌ ಆಯಿತು.

ತೀವ್ರ ಪೈಪೋಟಿಯಿದ್ದ ಬಾಲಕರ ವಿಭಾಗದ ಫೈನಲ್‌ ಪಂದ್ಯದಲ್ಲಿ ಎಂಸಿಎಚ್‌ಎಸ್‌ ತಂಡವು 55–50ರಿಂದ ಗೆಲುವು ಸಾಧಿಸಿತು. ಮೊದಲಾರ್ಧದಲ್ಲಿ 22–12ರಿಂದ ಮುನ್ನಡೆ ಪಡೆದದ್ದು ಎಂಸಿಎಚ್‌ಎಸ್‌ ತಂಡಕ್ಕೆ ವರವಾಯಿತು. ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಆತಿಥೇಯ ಜಿಲ್ಲೆಯ ಬೀಗಲ್ಸ್ ಬಿ.ಸಿ. ತಂಡವು 51–31ರಿಂದ ಮಂಡ್ಯ ಜಿಲ್ಲಾ ತಂಡವನ್ನು ಸುಲಭವಾಗಿ ಸೋಲಿಸಿತು.

ಬಾಲಕಿಯರ 10 ಮೀ. ಏರ್‌ ಪಿಸ್ತೂಲ್‌ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಂಗಳೂರಿನ ಆವಂತಿಕಾ ಮಧು ಸ್ವರ್ಣಕ್ಕೆ ಗುರಿ ಇಟ್ಟರು. ತಂಡ ವಿಭಾಗದ ಸ್ಪರ್ಧೆಯಲ್ಲಿಯೂ ಆವಂತಿಕಾ, ಕಿಯಾರಾ, ವೈಷ್ಣವಿ ಅವರಿದ್ದ ಆತಿಥೇಯ ಜಿಲ್ಲಾ ತಂಡವು ಚಿನ್ನ ತನ್ನದಾಗಿಸಿಕೊಂಡಿತು.

ADVERTISEMENT

ಬಾಲಕರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿಯೂ ಆತಿಥೇಯ ಶೂಟರ್‌ಗಳು ಪಾರಮ್ಯ ಮೆರೆದರು. ವೈಯಕ್ತಿಕ ವಿಭಾಗದಲ್ಲಿ ಅಪೂರ್ವ ವೈದ್ಯನಾಥ್‌ ಎಸ್‌. ಚಿನ್ನ ಗೆದ್ದರೆ, ತಂಡ ವಿಭಾಗದಲ್ಲಿ ಶ್ರವಣ್‌, ಸಿದ್ಧಾರ್ಥ್‌ ಹಾಗೂ ವಿಶ್ವ ಅವರು ಸ್ವರ್ಣಕ್ಕೆ ಕೊರಳೊಡ್ಡಿದರು.

ಜುಡೊ ಸ್ಪರ್ಧೆಯ ಫಲಿತಾಂಶಗಳು (ಚಿನ್ನದ ಪದಕ ವಿಜೇತರು): 25 ಕೆ.ಜಿ.ಯೊಳಗಿನ ಬಾಲಕರು: ಶೋಲ್ಕ ಕೃಷ್ಣ ಕೆ. (ಬೆಳಗಾವಿ), 30 ಕೆ.ಜಿ.ಯೊಳಗಿನ ಬಾಲಕರು: ಪ್ರದೀಪ್‌ ಶ್ರೀಕಂಠ ನಾಯಕ್‌  (ಬೆಳಗಾವಿ), 35 ಕೆ.ಜಿ.ಯೊಳಗಿನ ಬಾಲಕರು: ದರ್ಶನ್‌ ಕೆ.ಪಿ. (ಚಿಕ್ಕಮಗಳೂರು), 40 ಕೆ.ಜಿ.ಯೊಳಗಿನ ಬಾಲಕರು: ಗಣೇಶ್‌ ಎನ್‌.ಆರ್‌. (ಶಿವಮೊಗ್ಗ), 45 ಕೆ.ಜಿ.ಯೊಳಗಿನ ಬಾಲಕರು: ವರ್ಶಿತ್‌ ಕೆ.ಆರ್‌. (ಶಿವಮೊಗ್ಗ), 50 ಕೆ.ಜಿ.ಯೊಳಗಿನ ಬಾಲಕರು: ಕುಶಾಲ್‌ ಎಂ.ಎನ್‌. (ಶಿವಮೊಗ್ಗ), 55 ಕೆ.ಜಿ.ಯೊಳಗಿನ ಬಾಲಕರು: ಧ್ರುತಿಕ್‌ ಎನ್‌. ರೆಡ್ಡಿ (ಬೆಂಗಳೂರು), 60 ಕೆ.ಜಿ.ಯೊಳಗಿನ ಬಾಲಕರು: ಜಯಂತ್‌ ಎಚ್‌.ಡಿ. (ಮಂಡ್ಯ), 66 ಕೆ.ಜಿ.ಯೊಳಗಿನ ಬಾಲಕರು: ರೋಹಿತ್‌ ಶೆಟ್ಟಿ (ಮಂಡ್ಯ), 66 ಕೆ.ಜಿ. ಮೇಲ್ಪಟ್ಟ ಬಾಲಕರು: ಪವನ್‌ ಕುಮಾರ್‌ (ಚಿಕ್ಕಮಗಳೂರು).

23 ಕೆ.ಜಿ.ಯೊಳಗಿನ ಬಾಲಕಿಯರು: ಶ್ರೇಯಾ ಎಸ್‌. (ಬೆಳಗಾವಿ), 28 ಕೆ.ಜಿ.ಯೊಳಗಿನ ಬಾಲಕಿಯರು: ಶ್ರಾವಣಿ ಶೀತಲ್‌ ಬಿ.  (ಚಿಕ್ಕೋಡಿ), 36 ಕೆ.ಜಿ.ಯೊಳಗಿನ ಬಾಲಕಿಯರು: ಅಮೃತಾ ಬಿ. (ಚಿಕ್ಕಮಗಳೂರು), 40 ಕೆ.ಜಿ.ಯೊಳಗಿನ ಬಾಲಕಿಯರು: ರಂಜನಾ ಕೆ. ನಾಯಕ್‌ (ಬೆಳಗಾವಿ), 44 ಕೆ.ಜಿ.ಯೊಳಗಿನ ಬಾಲಕಿಯರು: ಸಾನ್ವಿ ಬಿ.ಟಿ.(ಬೆಂಗಳೂರು), 48 ಕೆ.ಜಿ.ಯೊಳಗಿನ ಬಾಲಕಿಯರು: ಕಾವೇರಿ ಆರ್‌.ಎಲ್‌. (ಚಿಕ್ಕಮಗಳೂರು), 52 ಕೆ.ಜಿ.ಯೊಳಗಿನ ಬಾಲಕಿಯರು: ಸೃಷ್ಟಿ (ದಾವಣಗೆರೆ), 57 ಕೆ.ಜಿ.ಯೊಳಗಿನ ಬಾಲಕಿಯರು: ಆರಾಧ್ಯ ಶ್ರೀ (ಚಿಕ್ಕಮಗಳೂರು), 57ಕೆ.ಜಿ. ಮೇಲ್ಪಟ್ಟ ಬಾಲಕಿಯರು: ಶಾಂತಲಾ ಜಿ. (ಚಿಕ್ಕಮಗಳೂರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.