ಮಂಗಳೂರು: ಬೆಂಗಳೂರಿನ ತೃಪ್ತಿ ಪುರೋಹಿತ್ ನೇರ ಸೆಟ್‌ಗಳಿಂದ ಖುಷಿ ವಿ. ಅವರನ್ನು ಸೋಲಿಸಿ ಮೂರನೇ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
ನಗರದ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಫೈನಲ್‌ನಲ್ಲಿ ತೃಪ್ತಿ 11–2, 11–3, 11–4, 11–6 ರಿಂದ ಖುಷಿ ವಿರುದ್ಧ ಜಯಗಳಿಸಿದರು.
ಇದಕ್ಕೆ ಮೊದಲು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಖುಷಿ 11–3, 13–11, 11–7, 13–11 ರಿಂದ ಸುಮೇಧಾ ಕೆ.ಎಸ್.ಭಟ್ ಅವರನ್ನು; ತೃಪ್ತಿ 11–2, 11–6, 11–7, 5–11, 5–11, 11–7 ರಿಂದ ತನಿಷ್ಕಾ ಕಪಿಲ್ ಕಾಲಭೈರವ್ ಅವರನ್ನು ಸೋಲಿಸಿದ್ದರು.
ಅಭಿನವ್ ಚಾಂಪಿಯನ್:
ಅಭಿನವ್ ಕೆ.ಮೂರ್ತಿ ಮತ್ತು ತನಿಷ್ಕಾ ಕಪಿಲ್ ಕಾಲಭೈರವ್ ಅವರು 19 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಕಿರೀಟ ಮುಡಿಗೇರಿಸಿಕೊಂಡರು.
ಅಭಿನವ್ ಉತ್ತಮ ಹೋರಾಟ ಕಂಡ ಫೈನಲ್‌ನಲ್ಲಿ ಅಥರ್ವ ನವರಂಗೆ ವಿರುದ್ಧ 4–11, 11–9, 12–10, 8–11, 12–10, 11–4 ರಲ್ಲಿ ಜಯಗಳಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ಅಭಿನವ್ 11–8, 11–8, 11–5 ರಿಂದ ಆರ್ಣವ್ ವಿರುದ್ಧ, ಅಥರ್ವ 3–11, 11–8, 11–6, 11–5 ರಿಂದ ವಿಭಾಸ್ ವಿ. ವಿರುದ್ಧ ಜಯಗಳಿಸಿದರು.
ತನಿಷ್ಕಾ ತೀವ್ರ ಪೈಪೋಟಿಯ ಫೈನಲ್‌ನಲ್ಲಿ 4–11, 13–11, 11–8, 19–17, 10–12, 11–6 ರಿಂದ ಹಿಮಾಂಶಿ ಚೌಧರಿ ಅವರನ್ನು ಸೋಲಿಸಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ಹಿಮಾಂಶಿ 11–6, 11–13, 11–7, 7–11, 11–6 ರಿಂದ ಹಿಯಾ ಸಿಂಗ್ ವಿರುದ್ಧ, ತನಿಷ್ಕಾ 4–11, 11–4, 12–10, 11–9 ರಿಂದ ನೀತಿ ಅಗರವಾಲ್ ವಿರುದ್ಧ ಗೆಲುವು ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.