ADVERTISEMENT

ಕಬಡ್ಡಿ: ಆತಿಥೇಯರಿಗೆ ಸತತ ಸೋಲು

ಪಿಟಿಐ
Published 13 ಅಕ್ಟೋಬರ್ 2018, 19:44 IST
Last Updated 13 ಅಕ್ಟೋಬರ್ 2018, 19:44 IST
ಹರಿಯಾಣ ಸ್ಟೀಲರ್ಸ್ ತಂಡದ ರೈಡರ್‌ ಯು ಮುಂಬಾದ ಬಲೆಯಲ್ಲಿ ಬಿದ್ದ ಸಂದರ್ಭ ಪಿಕೆಎಲ್‌ ಮೀಡಿಯಾ ಚಿತ್ರ
ಹರಿಯಾಣ ಸ್ಟೀಲರ್ಸ್ ತಂಡದ ರೈಡರ್‌ ಯು ಮುಂಬಾದ ಬಲೆಯಲ್ಲಿ ಬಿದ್ದ ಸಂದರ್ಭ ಪಿಕೆಎಲ್‌ ಮೀಡಿಯಾ ಚಿತ್ರ   

ಸೋನೆಪತ್‌: ಸಂಘಟಿತ ಆಟವಾಡಿದ ಯು ಮುಂಬಾಗೆ ಮಣಿದ ಆತಿಥೇಯ ಹರಿಯಾಣ ಸ್ಟೀಲರ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸತತ ಎರಡನೇ ಸೋಲು ಕಂಡಿತು.

ಇಲ್ಲಿನ ಮೋತಿಲಾಲ್ ನೆಹರೂ ಕ್ರೀಡಾಶಾಲೆಯ ಆವರಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಯು ಮುಂಬಾ ತಂಡ 53–26ರಿಂದ ಗೆದ್ದಿತು. ಅಭಿಷೇಕ್ ಸಿಂಗ್‌ (14 ಪಾಯಿಂಟ್‌), ರೋಹಿತ್ ಬಲಿಯನ್‌ (8 ಪಾಯಿಂಟ್‌) ಮತ್ತು ಸಿದ್ಧಾರ್ಥ್‌ ದೇಸಾಯಿ (8 ಪಾಯಿಂಟ್‌) ಅವರು ಮುಂಬಾ ಪರವಾಗಿ ಮಿಂಚಿದರು.

ತೆಲುಗು ಟೈಟನ್ಸ್‌ಗೆ ಗೆಲುವು: 19 ರೈಡ್‌ಗಳಲ್ಲಿ 11 ಪಾಯಿಂಟ್ ಹೆಕ್ಕಿ ತಂದ ರಾಹುಲ್ ಚೌಧರಿ ಅವರ ಉತ್ತಮ ಆಟದ ನೆರವಿನಿಂದ ತೆಲುಗು ಟೈಟನ್ಸ್ ತಂಡ ಮೊದಲ ಪಂದ್ಯದಲ್ಲಿ ಯು.ಪಿ.ಯೋಧಾ ವಿರುದ್ಧ 34–29ರಿಂದ ಗೆಲುವು ಸಾಧಿಸಿತು. ಅಬೋಜರ್ ಮಿಘಾನಿ ಮತ್ತು ನೀಲೇಶ್ ಸಾಳುಂಕೆ ಕ್ರಮವಾಗಿ ಆರು ಮತ್ತು ಐದು ಪಾಯಿಂಟ್ ಗಳಿಸಿ ಮಿಂಚಿದರು.

ADVERTISEMENT

ಯು.ಪಿ.ಯೋಧಾ ಪರವಾಗಿ ಕನ್ನಡಿಗ ಆಟಗಾರರಾದ ಪ್ರಶಾಂತ್ ಕುಮಾರ್ ರೈ ಮತ್ತು ರಿಷಾಂಕ್ ದೇವಾಡಿಗ ಕ್ರಮವಾಗಿ 11 ಮತ್ತು ಏಳು ಪಾಯಿಂಟ್ ಗಳಿಸಿದರು. ಆದರೂ ತಂಡ ಸೋಲಿಗೆ ಶರಣಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.