
ಪಿಟಿಐ
ಇಪೊ, ಮಲೇಷ್ಯಾ: ಮೊಹಮ್ಮದ್ ರಾಹಿಲ್ (15ನೇ ನಿ.) ಅವರು ಮೊದಲ ಕ್ವಾರ್ಟರ್‌ನಲ್ಲಿ ಗಳಿಸಿದ ನಿರ್ಣಾಯಕ ಗೋಲಿನ ನೆರವಿನಿಂದ ಭಾರತ ತಂಡವು ಭಾನುವಾರ ಆರಂಭಗೊಂಡ 31ನೇ ಆವೃತ್ತಿಯ ಸುಲ್ತಾನ್ ಅಜ್ಲನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಕೊರಿಯಾ ತಂಡವನ್ನು ಮಣಿಸಿತು.
ಮಳೆಯ ಅಡೆಚಣೆಯಿಂದಾಗಿ ಪಂದ್ಯವು ಆರು ತಾಸು ವಿಳಂಬವಾಗಿ ಆರಂಭಗೊಂಡಿತ್ತು. ಆದರೂ, ಛಲ ಬಿಡದೆ ಆಡಿದ ಭಾರತ ತಂಡವು ಬಲಿಷ್ಠ ಕೊರಿಯಾ ತಂಡವನ್ನು ಸೋಲಿಸಿ, ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
2019ರಲ್ಲಿ ಭಾರತ ತಂಡವು ರನ್ನರ್ಸ್ ಅಪ್ ಆಗಿತ್ತು. ಅದರ ನಂತರ ಇದೇ ಮೊದಲ ಬಾರಿಗೆ ತಂಡವು ಟೂರ್ನಿಯಲ್ಲಿ ಕಣಕ್ಕಿಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.