ADVERTISEMENT

19 ವರ್ಷದೊಳಗಿನವರ ಏಷ್ಯನ್‌ ಬಾಕ್ಸಿಂಗ್‌: ಸುಮನ್‌ ಕುಮಾರಿ ಶುಭಾರಂಭ

ಪಿಟಿಐ
Published 1 ಆಗಸ್ಟ್ 2025, 17:15 IST
Last Updated 1 ಆಗಸ್ಟ್ 2025, 17:15 IST
ಬಾಕ್ಸಿಂಗ್‌– ಪ್ರಾತಿನಿಧಿಕ ಚಿತ್ರ
ಬಾಕ್ಸಿಂಗ್‌– ಪ್ರಾತಿನಿಧಿಕ ಚಿತ್ರ   

ಬ್ಯಾಂಕಾಕ್‌: ಭಾರತದ ಸುಮನ್‌ ಕುಮಾರಿ ಅವರು ಶುಕ್ರವಾರ ಇಲ್ಲಿ ಆರಂಭವಾದ 19 ವರ್ಷದೊಳಗಿನವರ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್ಸ್‌ನಲ್ಲಿ ಶುಭಾರಂಭ ಮಾಡಿದರು.

ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಸುಮನ್‌, ಚೀನಾ ತೈಪೆಯ ಮೆಂಗ್‌–ಸಿನ್‌ ಶೆಂಗ್‌ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಮುನ್ನಡೆದರು. ಆದರೆ ಭಾರತದ ಇತರ ಸ್ಪರ್ಧಿಗಳು ನಿರಾಶೆ ಅನುಭವಿಸಿದರು.

ಪುರುಷರ 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಆಕಾಶ್‌ ಬಧ್ವಾಡ್‌, 70 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಾರಥಿ ಸೈನಿ ಹಾಗೂ 80 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಲೋಕೇಶ್‌ ಸೋಲನುಭವಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.