ADVERTISEMENT

ಸೈಕಿಕ್ ಫೋರ್ಸ್‌ಗೆ ರೋಚಕ ಜಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 20:00 IST
Last Updated 20 ಜುಲೈ 2019, 20:00 IST
ಕೆ.ಎನ್‌.ಗುರುಸ್ವಾಮಿ ಮೆಮೋರಿಯಲ್ ಟ್ರೋಫಿಗಾಗಿ ಶನಿವಾರ ನಡೆದ ರೇಸ್‌ನಲ್ಲಿ ಸೈಕಿಕ್ ಫೋರ್ಸ್‌ ಕುದುರೆಯನ್ನು ಮುನ್ನಡೆಸಿದ ಜಾಕಿ ಎಸ್‌.ಜರ್ವಾನ್‌ ಗುರಿ ದಾಟಿದ ಕ್ಷಣ –ಪ್ರಜಾವಾಣಿ ಚಿತ್ರ/ಎಸ್‌.ಕೆ.ದಿನೇಶ್
ಕೆ.ಎನ್‌.ಗುರುಸ್ವಾಮಿ ಮೆಮೋರಿಯಲ್ ಟ್ರೋಫಿಗಾಗಿ ಶನಿವಾರ ನಡೆದ ರೇಸ್‌ನಲ್ಲಿ ಸೈಕಿಕ್ ಫೋರ್ಸ್‌ ಕುದುರೆಯನ್ನು ಮುನ್ನಡೆಸಿದ ಜಾಕಿ ಎಸ್‌.ಜರ್ವಾನ್‌ ಗುರಿ ದಾಟಿದ ಕ್ಷಣ –ಪ್ರಜಾವಾಣಿ ಚಿತ್ರ/ಎಸ್‌.ಕೆ.ದಿನೇಶ್   

ಬೆಂಗಳೂರು: ಶನಿವಾರದ ಬೆಂಗಳೂರು ಬೇಸಿಗೆ ರೇಸ್‌ಗಳ ಪ್ರಧಾನ ಆಕರ್ಷಣೆ ‘ಕೆ.ಎನ್‌.ಗುರುಸ್ವಾಮಿ ಮೆಮೋರಿಯಲ್‌ ಟ್ರೋಫಿ’ ಒಂದು ಮೈಲು ದೂರದ ರೇಸ್‌ನಲ್ಲಿ ಡಾರಿಯಾಸ್‌ ಬೈರಾಮ್ಜಿ ತರಬೇತಿಯಲ್ಲಿ ಪಳಗಿರುವ ’ಸೈಕಿಕ್‌ ಫೋರ್ಸ್’ ರೋಚಕ ಜಯ ಗಳಿಸಿದೆ.

ಮುಕ್ತ ರೇಸ್‌ ಆಗಿ ಕಂಡು ಬರುತ್ತಿದ್ದ ಈ ರೇಸ್‌ನಲ್ಲಿ ’ಆಂಬ್ರೋಸಿಯೊ’ 2/1 ಬೇಡಿಕೆಯ ಫೇವರಿಟ್‌ ಆಗಿದ್ದರೆ, ‘ಸೈಕಿಕ್‌ ಫೋರ್ಸ್’ 8/1 ಬೇಡಿಕೆಯಲ್ಲಿತ್ತು. ಕೊನೆಯ ನೇರ ಓಟದಲ್ಲಿ, ಇನ್ನೂ ಒಂದು ಫರ್ಲಾಂಗ್‌ ಇರುವಂತೆಯೆ ಎಸ್‌.ಜರ್ವಾನ್‌ ಸವಾರಿಯಲ್ಲಿದ್ದ ’ಸೈಕಿಕ್‌ ಫೋರ್ಸ್’ ರಭಸದಿಂದ ಮುನ್ನುಗ್ಗಿ ಮುನ್ನಡೆ ಪಡೆಯಿತು.

ಕೊನೆಯ 150 ಮೀಟರ್ಸ್‌ನಲ್ಲಿ ‘ಆಂಬ್ರೋಸಿಯೊ’ ಭಾರಿ ಹೋರಾಟ ನಡೆಸಿದರೂ, ’ಸೈಕಿಕ್‌ ಫೋರ್ಸ್’ ತನ್ನ ಮುನ್ನಡೆ ಕಾಯ್ದು ಕಾದುಕೊಂಡು ನೆಕ್ ಅಂತರದ ಗೆಲುವು ಪಡೆಯಿತು. ’ಶೀಈಸ್‌ಮೈಸ್ಕ್ರಿಪ್ಟ್‌’ ಮತ್ತು ’ನ್ಯೂ ಕ್ರಿಯೇಶನ್‌’ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.