ADVERTISEMENT

ಈಜು: ಎರಡನೇ ದಿನವೂ ಸ್ವಿಮ್ ಲೈಫ್ ಮೇಲುಗೈ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 15:20 IST
Last Updated 10 ಅಕ್ಟೋಬರ್ 2021, 15:20 IST
ಈಜು
ಈಜು   

ಬೆಂಗಳೂರು: ಸ್ವಿಮ್‌ಲೈಫ್‌ ಈಜುಕೇಂದ್ರ ಇಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ ಮಾಸ್ಟರ್ಸ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಪಾರಮ್ಯ ಮೆರೆಯಿತು. ವಿಜಯನಗರದ ಪಾಲಿಕೆ ಈಜುಕೊಳದಲ್ಲಿ ನಡೆದ ಸ್ಪರ್ಧೆಗಳ 35 ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿತು. 19 ವಿಭಾಗಗಳಲ್ಲಿ ಎರಡನೇ ಸ್ಥಾನವನ್ನೂ ತನ್ನದಾಗಿಸಿಕೊಂಡಿತು.

ಮೆ‍ಡ್ಲೆ ವಿಭಾಗಗಳಲ್ಲಿ ಬಸವನಗುಡಿ ಈಜುಕೇಂದ್ರ, ಸನ್‌ ಸಿಟಿ, ಸ್ವಿಮ್ಮರ್ಸ್ ಕ್ಲಬ್‌ ಮುಂತಾದ ತಂಡಗಳು ಕೂಡ ಗಮನಾರ್ಹ ಸಾಧನೆ ಮಾಡಿದವು. ಪುರುಷರ 4x50 ಮೀಟರ್ಸ್‌ ಮೆಡ್ಲೆಯ ‘ಎ’ ಗುಂಪಿನಲ್ಲಿ ಬಸವನಗುಡಿ ಈಜುಕೇಂದ್ರ (2:29.65) ಮೊದಲ ಸ್ಥಾನ ಗಳಿಸಿದರೆ ಪೇಸ್ ಅಕ್ವಾಟಿಕ್ಸ್ ಮತ್ತು ಶಿವಮೊಗ್ಗ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದವು.

‘ಬಿ’ ಗುಂಪು: ಸ್ವಿಮ್ ಲೈಫ್ (2:24.81)–1, ಬಸವನಗುಡಿ–2, ನೆಟ್ಟಕಲ್ಲಪ್ಪ ಈಜುಕೇಂದ್ರ–3; ‘ಸಿ’ ಗುಂಪು: ಸನ್‌ಸಿಟಿ ಅಕ್ವಾಟಿಕ್ಸ್ (3:03.49)–1, ಬಳ್ಳಾರಿ–2, ಸ್ವಿಮ್‌ಲೈಫ್–ಎ–3; ‘ಡಿ’ ಗುಂಪು: ಸ್ವಿಮ್ಮರ್ಸ್ ಕ್ಲಬ್‌ (2:38.50)–1, ಮಂಗಳಾ ಸ್ವಿಮ್ಮರ್ ಕ್ಲಬ್–2, ಬಿ.ಜೆ.ಕರ್ನಾಟಕ–3; ‘ಇ’ ಗುಂಪು: ಬಿಬಿಎಂ (3:54.81)–1; ‘ಎಫ್‌’ ಗುಂಪು: ಸ್ವಿಮ್‌ ಲೈಫ್ (3:48.97)–1, ಮೈಸೂರು ವಿಶ್ವವಿದ್ಯಾಲಯ–2;

ADVERTISEMENT

ಮಹಿಳೆಯರ 4x50 ಮೀಟರ್ಸ್‌ ಮೆಡ್ಲೆಯ ‘ಬಿ’ ಗುಂಪಿನಲ್ಲಿ ಸ್ವಿಮ್‌ಲೈಫ್ (3:27.40) ಹಾಗೂ ಬಿ.ಬಿ.ಬಿ.ಬಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದವು. ‘ಡಿ’ ಗುಂಪು: ಸ್ವಿಮ್‌ಲೈಫ್ (3:53.16)–1, ಸೌತ್ ಈಸ್ಟ್–2; ‘ಇ’ ಗುಂ‍ಪು: ಸ್ವಿಮ್‌ಲೈಫ್ (4:08.23)–1;

ಪುರುಷರ 4x50 ಮೀಟರ್ಸ್ ಫ್ರೀಸ್ಟೈಲ್‌ನ ‘ಎ’ ಗುಂಪಿನಲ್ಲಿ ಸ್ಪ್ರಿಂಟ್ ಅಕಾಡೆಮಿ (2:03.50) ಮತ್ತು ವಿಜಯನಗರ ಈಜುಕೇಂದ್ರ ಕ್ರಮವಾಗಿ ಮೊದಲೆರಡು ಬಹುಮಾನ ಗಳಿಸಿದವು. ‘ಬಿ’ ಗುಂಪು: ಪೀಸ್ ಅಕಾಡೆಮಿ (2:11.31)–1, ಸ್ವಿಮ್‌ ಲೈಫ್–2, ಶಿವಮೊಗ್ಗ ಸ್ಪೋರ್ಟ್ಸ್ ಕಾಂಪ್ಲೆಕ್ಸ್–3;. ‘ಸಿ’ ಗುಂಪು: ಸ್ವಿಮ್‌ಲೈಫ್ (2:41.06)–1, ಎನ್‌ಎಂಎಸ್ಎ–2, ಸನ್‌ಸಿಟಿ–3; ‘ಡಿ’ ಗುಂಪು: ಮಂಗಳ ಸ್ವಿಮ್ಮಿಂಗ್ ಕ್ಲಬ್‌ (2:20.25)–1, ಸ್ವಿಮ್ಮರ್ಸ್‌ ಕ್ಲಬ್‌–2, ಬಿ.ಜೆ. ಕರ್ನಾಟಕ–3; ‘ಇ’ ಗುಂಪು: ಬೆಂಗಳೂರು ಕ್ಲಬ್‌ (2:28.31)–1, ಮಂಗಳ ಸ್ವಿಮ್ಮಿಂಗ್‌ ಕ್ಲಬ್‌–2.

ಮಹಿಳೆಯರ ವಿಭಾಗ: ಸ್ವಿಮ್‌ಲೈಫ್‌ (2:48.59)–1, ಬಿ.ಬಿ.ಬಿ.ಬಿ–2; ‘ಸಿ‘ ಗುಂಪು: ಎನ್‌ಎಂಎಸ್‌ಎ (2:43.16)–1, ಸ್ವಿಮ್‌ಲೈಫ್ ಬಿ–2, ಸ್ವಿಮ್‌ಲೈಫ್ ಎ–3; ‘ಇ’ ಗುಂಪು: ಸ್ಮಿಮ್‌ಲೈಫ್‌ (4:42.25)–1; ‘ಎಫ್‌’ ಗುಂಪು: ಸ್ವಿಮ್‌ಲೈಫ್‌ (3:05.94)–1, ವಿಶ್ವವಿದ್ಯಾಲಯ ಈಜುಕೇಂದ್ರ–2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.