ADVERTISEMENT

35ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌: ಕರ್ನಾಟಕದ ಯಶ್‌, ಸಿದ್ಧಿ ದಾಖಲೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 16:17 IST
Last Updated 27 ಡಿಸೆಂಬರ್ 2024, 16:17 IST
ಯಶ್‌ ಎಚ್‌.ಪಾಲ್‌
ಯಶ್‌ ಎಚ್‌.ಪಾಲ್‌   

ಬೆಂಗಳೂರು: ಕರ್ನಾಟಕದ ಯಶ್ ಎಚ್.ಪಾಲ್ ಮತ್ತು ಸಿದ್ಧಿ ಜಿ. ಶಾ ಅವರು ವಿಜಯವಾಡದಲ್ಲಿ ಶುಕ್ರವಾರ ಆರಂಭವಾದ 35ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆಯೊಂದಿಗೆ ಕೂಟ ದಾಖಲೆ ನಿರ್ಮಿಸಿದರು.

ಬಾಲಕರ 200 ಮೀಟರ್‌ ಬ್ರೆಸ್ಟ್ ಸ್ಟ್ರೋಕ್ (ಗುಂಪು 2) ಸ್ಪರ್ಧೆಯಲ್ಲಿ ಯಶ್ 2 ನಿಮಿಷ 30.05 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಈ ಮೂಲಕ ಎಂ.ಎಸ್‌. ನಿತೀಶ್‌ (2 ನಿ.33.37ಸೆ) ಅವರ ದಾಖಲೆ ಮುರಿದರು.

ಬಾಲಕಿಯರ 100 ಮೀಟರ್ ಬ್ಯಾಕ್‌ಸ್ಟ್ರೋಕ್ (ಗುಂಪು 1) ಸ್ಪರ್ಧೆಯಲ್ಲಿ ಸಿದ್ಧಿ 1 ನಿಮಿಷ 08.98 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ, ಆರುಷಿ ಅಗರವಾಲ್‌ (1 ನಿ.09.26ಸೆ) ಹೆಸರಿನಲ್ಲಿದ್ದ ದಾಖಲೆಯನ್ನು ತನ್ನದಾಗಿಸಿಕೊಂಡರು.

ADVERTISEMENT

ತಮಿಳುನಾಡಿನ ರೊನೆಲ್ ರೆಟ್ನಮ್ ಇ.ಜೆ ಅವರು ಬಾಲಕರ 50 ಮೀಟರ್‌ ಬಟರ್‌ಫ್ಲೈ (ಗುಂಪು 2) ಸ್ಪರ್ಧೆಯಲ್ಲಿ 27.35 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಹೊಸ ದಾಖಲೆ ನಿರ್ಮಿಸಿದರು.

ಫಲಿತಾಂಶ: (ಕರ್ನಾಟಕ ಪದಕ ವಿಜೇತರು ಮಾತ್ರ)

ಬಾಲಕರು: ಗುಂಪು 1

1500 ಮೀ ಫ್ರೀಸ್ಟೈಲ್: ನಮನ್ ಎಂ.ಎನ್–3; 200 ಮೀ ಬ್ರೆಸ್ಟ್ ಸ್ಟ್ರೋಕ್: ಸಾಯೇಶ್ ಕಿಣಿ– 1, ಆಯುಷ್ ಶಿವರಾಜು ಮಾಗನಹಳ್ಳಿ–2; 50 ಮೀ ಬಟರ್ ಫ್ಲೈ: ಅನೀಶ್ ಅನಿರುದ್ಧ ಕೋರೆ–1; ಸ್ವರೂಪ್ ಧನುಚೆ– 3; 200 ಮೀ ಫ್ರೀಸ್ಟೈಲ್: ಸಂಪತ್ ಕುಮಾರ್ ಯಾದವ್– 1; ರೇಣುಕಾಚಾರ್ಯ ಹೊದ್ಮನಿ–3; 100 ಮೀ ಬ್ಯಾಕ್ ಸ್ಟ್ರೋಕ್: ‌ಸ್ವರೂಪ್ ಧನುಚೆ– 3; 50 ಮೀ ಬ್ರೆಸ್ಟ್ ಸ್ಟ್ರೋಕ್: ಆಯುಷ್ ಶಿವರಾಜು–2; 4x200 ಮೀ ಫ್ರೀಸ್ಟೈಲ್ ರಿಲೆ: ಕರ್ನಾಟಕ–1.

ಬಾಲಕಿಯರು: ಗುಂಪು 1

1500 ಮೀ ಫ್ರೀಸ್ಟೈಲ್: ಜನ್ಯಾ ಬಿ.ಎಸ್– 1; ನಮ್ರತಾ ವೆಂಕಟೇಶ್– 2; 200 ಮೀ ಬ್ರೆಸ್ಟ್ ಸ್ಟ್ರೋಕ್: ಸಮನ್ವಿ ಇ.ಎಸ್–2, ರಿಷಿಕಾ ಎಂ.ವಿ–3; 50 ಮೀ ಬಟರ್ ಫ್ಲೈ: ರಿಷಿಕಾ ಯು.ಎಂ–1; ಇಂಚರಾ ಫಣೀಂದ್ರನಾಥ್–2. 200ಮೀ ಫ್ರೀಸ್ಟೈಲ್: ರಿಷಿಕಾ ಎಂ.ವಿ–1; ಜಗಶ್ರೀ ಪೂಜಾ–2; 100 ಮೀ ಬ್ಯಾಕ್‌ಸ್ಟ್ರೋಕ್: ಸಿದ್ಧಿ ಜಿ. ಶಾ– 1, ತನ್ಮಯಿ ಧರ್ಮೇಶ್– 2; 50 ಮೀ ಬ್ರೆಸ್ಟ್ ಸ್ಟ್ರೋಕ್: ಪ್ರತೀಕ್ಷಾ ಎನ್. ಶೆಣೈ– 1; ಸಮನ್ವಿ ಇ.ಎಸ್– 2; 4x200 ಮೀ ಫ್ರೀಸ್ಟೈಲ್ ರಿಲೆ: ಕರ್ನಾಟಕ– 1.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.