ADVERTISEMENT

ಸುರಾನ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಅಂತರ ಕಾಲೇಜು ಈಜು ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 19:30 IST
Last Updated 22 ಸೆಪ್ಟೆಂಬರ್ 2018, 19:30 IST
ಬೆಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ಅಂತರ ಕಾಲೇಜು ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದ ಸುರಾನ ಕಾಲೇಜು ತಂಡದವರು. (ಎಡದಿಂದ) ಲಿಂಗರಾಜ್‌ (ಬೆಂಗಳೂರು ವಿ.ವಿ. ನಿರ್ದೇಶಕರು), ಅಮರನಾಥ್‌ (ಕೋಚ್‌), ಯಾಕೂಬ್‌ ಸಲೀಂ, ಎ.ಎಂ.ವೇದಾಂತ್‌, ರಯಾನ್‌ ಮೆಕಾಯ್‌, ತಿಪ್ಪೇಸ್ವಾಮಿ (ಸಂಘಟನಾ ಕಾರ್ಯದರ್ಶಿ) ಮತ್ತು ಶೀತಲ್‌ ಕಿರಣ್‌ (ದೈಹಿಕ ಶಿಕ್ಷಣ ನಿರ್ದೇಶಕರು, ಸುರಾನ ಕಾಲೇಜು).

ಬೆಂಗಳೂರು: ಸುರಾನ ಕಾಲೇಜು ತಂಡದವರು ಬೆಂಗಳೂರು ವಿಶ್ವವಿದ್ಯಾಲಯ ಆಶ್ರಯದ ಅಂತರ ಕಾಲೇಜು ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದಿದ್ದಾರೆ.

ಬಸವನಗುಡಿ ಈಜು ಕೇಂದ್ರದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಸುರಾನ ಕಾಲೇಜು ಒಟ್ಟು 108 ಪಾಯಿಂಟ್ಸ್‌ ಕಲೆಹಾಕಿ ಮೊದಲ ಸ್ಥಾನ ಗಳಿಸಿತು.

ಈ ಕಾಲೇಜಿನ ರಯಾನ್‌ ಮೆಕಾಯ್‌ ಅವರು ಚಾಂಪಿಯನ್‌ಷಿಪ್‌ನ ಶ್ರೇಷ್ಠ ಈಜುಪಟು ಗೌರವ ಗಳಿಸಿದರು. ಅವರು 10 ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದರು.

ADVERTISEMENT

ಯಾಕೂಬ್‌ ಸಲೀಂ ( 2ಚಿನ್ನ, 7 ಬೆಳ್ಳಿ, 1 ಕಂಚು) ಮತ್ತು ಎ.ಎಂ.ವೇದಾಂತ್‌ (2 ಚಿನ್ನ, 3 ಬೆಳ್ಳಿ ಮತ್ತು 1ಕಂಚು) ಕೂಡಾ ಮಿಂಚಿದರು.

ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಎಲ್ಲಾ ಈಜುಪಟುಗಳು ಜೈನ್‌ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಸೆಪ್ಟೆಂಬರ್‌ 26ರಿಂದ 29ರವರೆಗೆ ನಡೆಯುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.