ADVERTISEMENT

ಸ್ವಿಸ್‌ ಓಪನ್ ಬ್ಯಾಡ್ಮಿಂಟನ್‌: ಸಿಂಧುಗೆ ಪ್ರಶಸ್ತಿ ಉಳಿಸಿಕೊಳ್ಳುವ ಸವಾಲು

ಪ್ರಣಯ್, ಸೇನ್ ಕಣಕ್ಕೆ

ಪಿಟಿಐ
Published 21 ಮಾರ್ಚ್ 2023, 7:24 IST
Last Updated 21 ಮಾರ್ಚ್ 2023, 7:24 IST
ಪಿ.ವಿ. ಸಿಂಧು– ಪಿಟಿಐ ಚಿತ್ರ
ಪಿ.ವಿ. ಸಿಂಧು– ಪಿಟಿಐ ಚಿತ್ರ   

ಬಾಸೆಲ್‌, ಸ್ವಿಟ್ಜರ್ಲೆಂಡ್‌: ಪ್ರಶಸ್ತಿ ಉಳಿಸಿಕೊಳ್ಳುವ ನಿರೀಕ್ಷೆ ಯೊಂದಿಗೆ ಭಾರತದ ಪಿ.ವಿ.ಸಿಂಧು ಅವರು ಸ್ವಿಸ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಈ ಟೂರ್ನಿಯಲ್ಲಿ ಕಳೆದ ಬಾರಿ ಸಿಂಧು ಚಾಂಪಿಯನ್ ಆಗಿದ್ದರು.

ಮಂಗಳವಾರದಿಂದ ಟೂರ್ನಿಯು ಇಲ್ಲಿ ನಡೆಯಲಿದ್ದು, ಎಚ್‌.ಎಸ್‌. ಪ್ರಣಯ್ ಕೂಡ ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸದಲ್ಲಿದ್ದಾರೆ.ಕಳೆದ ವಾರ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತಿದ್ದ ಸಿಂಧು ಅವರು, ಮಹಿಳಾ ಸಿಂಗಲ್ಸ್ ಮೊದಲ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್‌ನ ಜೆಂಜಿರಾ ಸ್ಟೆಡಲ್‌ಮನ್‌ ವಿರುದ್ಧ ಸೆಣಸುವರು.

ADVERTISEMENT

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಣಯ್ ಅವರು ಚೀನಾದ ಶಿ ಯುಕಿ ಅವರಿಗೆ ಮುಖಾಮುಖಿಯಾಗುವರು. ಲಕ್ಷ್ಯ ಸೇನ್ ಅವರು ಹಾಂಗ್‌ಕಾಂಗ್‌ನ ಲೀ ಚೆವುಕ್‌ ಯಿವ್ ಎದುರು, ಕಿದಂಬಿ ಶ್ರೀಕಾಂತ್‌ ಚೀನಾದ ವೆಂಗ್ ಹಾಂಗ್‌ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಮಹಿಳಾ ಡಬಲ್ಸ್‌ ಜೋಡಿ ಗಾಯತ್ರಿ ಗೋಪಿಚಂದ್‌ ಮತ್ತು ತ್ರಿಶಾ ಜೋಲಿ ಅವರು ಮೊದಲ ಸುತ್ತಿನಲ್ಲಿ ಇಂಡೊನೇಷ್ಯಾದ ಅಪ್ರಿಯಾನಿ ರಹಾಯು– ಸಿತಿ ಫದಿಯಾ ಸಿಲ್ವಾ ವಿರುದ್ಧ ಆಡಲಿದ್ದರೆ, ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಅವರು ಚೀನಾದ ಲಿಯಾಂಗ್‌ ವೇ ಕೆಂಗ್‌– ವಾಂಗ್‌ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.