ADVERTISEMENT

ರೋಹನ್–ಸಿಕ್ಕಿ ರೆಡ್ಡಿಗೆ ಗೆಲುವು

ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌: ಅಶ್ವಿನಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 18:49 IST
Last Updated 21 ಮಾರ್ಚ್ 2023, 18:49 IST
ಮಾಳವಿಕಾ ಬನ್ಸೊದ್‌
ಮಾಳವಿಕಾ ಬನ್ಸೊದ್‌   

ಬಾಸೆಲ್‌, ಸ್ವಿಟ್ಜರ್‌ಲೆಂಡ್‌: ಭಾರತದ ರೋಹನ್ ಕಪೂರ್‌ ಮತ್ತು ಸಿಕ್ಕಿ ರೆಡ್ಡಿ ಜೋಡಿ ಇಲ್ಲಿ ನಡೆಯುತ್ತಿರುವ ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಗೆಲುವು ಸಾಧಿಸಿತು.

ಮಂಗಳವಾರ ನಡೆದ ಮಿಶ್ರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಭಾರತದ ಜೋಡಿ 21-17, 15-21, 21-18ರಲ್ಲಿ ಜರ್ಮನಿಯ ಪ್ಯಾಟ್ರಿಕ್‌ ಶಿಯೆಲ್– ಫ್ರಾನ್ಸಿಸ್ಕಾ ಫೋಕ್ಮನ್‌ ವಿರುದ್ಧ ಗೆದ್ದಿತು.

ಅಶ್ವಿನಿ ಪೊನ್ನಪ್ಪ ಅವರಿಗೆ ಮಹಿಳೆಯರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗದಲ್ಲಿ ನಿರಾಸೆ ಎದುರಾಯಿತು. ಮಿಶ್ರ ಡಬಲ್ಸ್‌ ವಿಭಾಗದ ಅರ್ಹತಾ ಪಂದ್ಯದಲ್ಲಿ ಅಶ್ವಿನಿ–ಬಿ.ಸುಮೀತ್‌ ರೆಡ್ಡಿ ಜೋಡಿ 20–22, 12–21 ರಲ್ಲಿ ಚೀನಾ ತೈಪೆಯ ಚಿಯು ಸಿಯಾಂಗ್‌– ಲಿನ್‌ ಕ್ಸಿಯಾವೊ ಮಿನ್‌ ಎದುರು ಪರಾಭವಗೊಂಡಿತು.

ADVERTISEMENT

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಅಶ್ವಿನಿ– ತನೀಷಾ ಕ್ರಾಸ್ತೊ ಜೋಡಿ 19–21, 15–21 ರಲ್ಲಿ ಚೀನಾದ ದು ಯುಯಿ– ಕ್ಸಿಯಾ ಯು ತಿಂಗ್‌ ಕೈಯಲ್ಲಿ ಸೋತಿತು.

ಪುರುಷರ ಡಬಲ್ಸ್‌ನಲ್ಲಿ ರೋಹನ್‌– ಸುಮೀತ್‌ ರೆಡ್ಡಿ ಜೋಡಿ 15–21, 20–22 ರಲ್ಲಿ ಬೂನ್‌ ಕ್ಸಿನ್‌ ಯುವಾನ್‌– ವಾಂಗ್‌ ತಿಯೆನ್‌ ಸಿ ಎದುರು ನಿರಾಸೆ ಅನುಭವಿಸಿತು.

ಮಹಿಳೆಯರ ಡಬಲ್ಸ್‌ನಲ್ಲಿ ಸಿಕ್ಕಿ ರೆಡ್ಡಿ– ಆರತಿ ಸಾರಾ ಸುನಿಲ್‌ ಜೋಡಿ 21–15, 15–21, 21–18 ರಲ್ಲಿ ಪೌಲಾ ಲಿನ್‌– ಲಾರೆನ್‌ ಲ್ಯಾಮ್‌ ಅವರನ್ನು ಸೋಲಿಸಿತು.

ಮಾಳವಿಕಾ ಬನ್ಸೊದ್‌ಗೆ ಗೆಲುವು: ಮಾಳವಿಕಾ ಬನ್ಸೊದ್‌ ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ 21–17, 21–7 ರಲ್ಲಿ ಅಮೆರಿಕದ ಲಾರೆನ್‌ ಲ್ಯಾಮ್‌ ಅವರನ್ನು ಸೋಲಿಸಿದರು. ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಪ್ರಿಯಾನ್ಶು ರಾಜಾವತ್‌ 7–21, 5–21 ರಲ್ಲಿ ಚೀನಾ ತೈಪೆಯ ಚಿಯಾ ಹಾವೊ ಲೀ ಎದುರು ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.