ADVERTISEMENT

ಸೈಯ್ಯದ್ ಮೋದಿ ಇಂಟರ್‌ ನ್ಯಾಷನಲ್ ಬ್ಯಾಡ್ಮಿಂಟನ್: ಹಿಂದೆ ಸರಿದ ಸಾತ್ವಿಕ್‌–ಚಿರಾಗ್

ಪಿಟಿಐ
Published 27 ನವೆಂಬರ್ 2024, 0:52 IST
Last Updated 27 ನವೆಂಬರ್ 2024, 0:52 IST
<div class="paragraphs"><p>ಸಾತ್ವಿಕ್‌– ಚಿರಾಗ್ ಜೋಡಿ </p></div>

ಸಾತ್ವಿಕ್‌– ಚಿರಾಗ್ ಜೋಡಿ

   

ಪಿಟಿಐ ಚಿತ್ರ

ಲಖನೌ: ಭಾರತದ ಅಗ್ರ ಡಬಲ್ಸ್ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಸೈಯ್ಯದ್ ಮೋದಿ ಇಂಟರ್‌ ನ್ಯಾಷನಲ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಿಂದ ಮಂಗಳವಾರ ಹಿಂದೆಸರಿದರು.

ADVERTISEMENT

ಈ ಜೋಡಿ ಪ್ರಶಸ್ತಿಗೆ ನೆಚ್ಚಿನ ತಂಡವಾಗಿತ್ತು. ಪ್ಯಾರಿಸ್ ಒಲಿಂಪಿಕ್ಸ್‌ ನಂತರ ಸಾತ್ವಿಕ್‌ಗೆ ಭುಜದ ನೋವು ಕಾಡಿತ್ತು. ಹೀಗಾಗಿ ಅವರು ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ನಿಂದ ದೂರವಿದ್ದರು. ಕಳೆದ ವಾರ ಚೀನಾ ಮಾಸ್ಟರ್ಸ್‌ ಟೂರ್ನಿ ಮೂಲಕ ಪುನರಾಗಮನ ಮಾಡಿದ್ದು ಸೆಮಿಫೈನಲ್ ತಲುಪಿದ್ದರು.

‘ಸಾತ್ವಿಕ್ ಪೂರ್ಣವಾಗಿ ಚೇತರಿಸಿಲ್ಲದ ಕಾರಣ ಈ ಜೋಡಿ ಆಡುತ್ತಿಲ್ಲ’ ಎಂದು ಅವರಿಗೆ ತರಬೇತಿ ನೀಡುತ್ತಿದ್ದ ಬಿ.ಸುಮೀತ್ ರೆಡ್ಡಿ ‘ಪಿಟಿಐ’ಗೆ ತಿಳಿಸಿದರು.

ವಿಶ್ವದ ಮಾಜಿ ಅಗ್ರ ಕ್ರಮಾಂಕದ ಆಟಗಾರರಾಗಿದ್ದ ಸಾತ್ವಿಕ್‌–ಚಿರಾಗ್ ಜೋಡಿಗೆ ಇಲ್ಲಿ ಅಗ್ರ ಶ್ರೇಯಾಂಕ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.