ADVERTISEMENT

ಟಿಟಿ: ಯಶಸ್ವಿನಿ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 20:21 IST
Last Updated 13 ಸೆಪ್ಟೆಂಬರ್ 2019, 20:21 IST
ಯಶಸ್ವಿನಿ ಘೋರ್ಪಡೆ
ಯಶಸ್ವಿನಿ ಘೋರ್ಪಡೆ   

ಮೈಸೂರು: ಪ್ರಭಾವಿ ಆಟವಾಡಿದ ಯಶಸ್ವಿನಿ ಘೋರ್ಪಡೆ ಅವರು ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಮಹಿಳೆಯರ ಮತ್ತು ಜೂನಿಯರ್‌ ಬಾಲಕಿಯರ ವಿಭಾಗಗಳಲ್ಲಿ ಚಾಂಪಿಯನ್‌ ಆದರು. ಯೂತ್‌ ಬಾಲಕಿಯರ ವಿಭಾಗದಲ್ಲೂ ಪ್ರಶಸ್ತಿ ಜಯಿಸಿದ್ದ ಅವರು ‘ಹ್ಯಾಟ್ರಿಕ್‌’ ಸಾಧನೆ ಮಾಡಿದರು.

ಮೈಸೂರು ಜಿಲ್ಲಾ ಟೇಬಲ್‌ ಟೆನಿಸ್‌ ಸಂಸ್ಥೆ ಆಶ್ರಯದಲ್ಲಿ ವಿ.ವಿ. ಜಿಮ್ಖಾನಾ ಹಾಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಸ್ಕೈಸ್‌ ಅಕಾಡೆಮಿಯ ಯಶಸ್ವಿನಿ 11-9,11-4,9-11,13-11,11-9 ರಲ್ಲಿ ಬಿಎನ್‌ಎಂನ ವಿ.ಖುಷಿ ಅವರನ್ನು ಮಣಿಸಿದರು. ಸಂಜೆ ನಡೆದ ಜೂನಿಯರ್‌ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ 11-6,13-11,10-12,11-8,11-6 ಎಂಎಸ್‌ಎಸ್‌ನ ಅನರ್ಘ್ಯಾ ಮಂಜುನಾಥ್ ವಿರುದ್ಧ ಗೆದ್ದರು.

ಅನಿರ್ಬನ್‌ಗೆ ಪ್ರಶಸ್ತಿ: ಸಿಟಿಬಿಯ ಅನಿರ್ಬನ್‌ ರಾಯ್‌ ಚೌಧರಿ ಅವರು ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ 11-3,11-8,11-9,11-5 ರಲ್ಲಿ ಸಮರ್ಥ್‌ ಕೆ. ಅವರನ್ನು ಸೋಲಿಸಿದರು.ಜೂನಿಯರ್‌ ಬಾಲಕರ ವಿಭಾಗದ ಫೈನಲ್‌ನಲ್ಲಿ ಪಿ.ವಿ.ಶ್ರೀಕಾಂತ್‌ ಕಶ್ಯಪ್ 11-13,9-11,11-9,11-1,11-7,11-3 ಸುಜನ್‌ ಆರ್‌.ಭಾರದ್ವಾಜ್‌ ಅವರನ್ನು ಸೋಲಿಸಿ ಚಾಂಪಿಯನ್‌ ಆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.