ADVERTISEMENT

ಟೇಬಲ್ ಟೆನಿಸ್: ಹರ್ಮೀತ್‌– ಯಶಸ್ವಿನಿ ರನ್ನರ್ಸ್‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 16:00 IST
Last Updated 15 ಫೆಬ್ರುವರಿ 2026, 16:00 IST
<div class="paragraphs"><p>ಪ್ರಶಸ್ತಿಯೊಂದಿಗೆ ಹರ್ಮೀತ್‌ ದೇಸಾಯಿ ಹಾಗೂ ಯಶಸ್ವಿನಿ ಘೋರ್ಪಡೆ</p></div>

ಪ್ರಶಸ್ತಿಯೊಂದಿಗೆ ಹರ್ಮೀತ್‌ ದೇಸಾಯಿ ಹಾಗೂ ಯಶಸ್ವಿನಿ ಘೋರ್ಪಡೆ

   

–‘ಎಕ್ಸ್‌’ ಚಿತ್ರ

ಚೆನ್ನೈ: ಭಾರತದ ಹರ್ಮೀತ್‌ ದೇಸಾಯಿ ಹಾಗೂ ಯಶಸ್ವಿನಿ ಘೋರ್ಪಡೆ ಅವರು ಭಾನುವಾರ ಇಲ್ಲಿ ಮುಕ್ತಾಯಗೊಂಡ ಡಬ್ಲ್ಯುಟಿಟಿ ಸ್ಟಾರ್ ಕಂಟೆಂಡರ್ ಟೇಬಲ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ರನ್ನರ್ಸ್‌ಅಪ್‌ ಆದರು.

ADVERTISEMENT

ಈ ಜೋಡಿಯು ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 0–3ರಿಂದ (9–11, 2–11, 8–11) ರೊಮೇನಿಯಾ ಜೋಡಿ ಎಡ್ವರ್ಡ್‌ ಇಯೊನೆಸ್ಕು– ಬರ್ನಡೆಟ್‌ ಝೋಕ್ಸ್‌ ವಿರುದ್ಧ ಪರಾಭವಗೊಂಡಿತು. ಕರ್ನಾಟಕದ ಅಗ್ರಮಾನ್ಯ ಆಟಗಾರ್ತಿ ಯಶಸ್ವಿನಿ ಹಾಗೂ ಗುಜರಾತ್‌ನ ಅನುಭವಿ ಆಟಗಾರ ಹರ್ಮೀತ್‌ ಅವರು ನಾಲ್ಕನೇ ಶ್ರೇಯಾಂಕ ಪಡೆದಿದ್ದರು.

ಆದರೆ, ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದ ಭಾರತದ ಸತ್ಯನ್‌ ಜ್ಞಾನೇಶ್ವರನ್‌ ಅವರು 0–3ರಿಂದ (6–11, 8–11, 11–13) ಚೆಕಿಯಾದ ಲುಬೊಮೀರ್‌ ಜ್ಯಾನ್‌ಚಾರಿಕ್‌ ವಿರುದ್ಧ ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.