ADVERTISEMENT

ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿ: ಸೆಮಿಫೈನಲ್‌ಗೆ ಯಶಸ್ವಿನಿ, ಖುಷಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 15:40 IST
Last Updated 30 ಅಕ್ಟೋಬರ್ 2020, 15:40 IST
ಯಶಸ್ವಿನಿ ಘೋರ್ಪಡೆ– ಸಂಗ್ರಹ ಚಿತ್ರ
ಯಶಸ್ವಿನಿ ಘೋರ್ಪಡೆ– ಸಂಗ್ರಹ ಚಿತ್ರ   

ಬೆಂಗಳೂರು: ಉತ್ತಮ ಆಟವಾಡಿದ ಖುಷಿ.ವಿ ಹಾಗೂ ಅನರ್ಘ್ಯಾ ಮಂಜುನಾಥ್‌ ಅವರು ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ ತಲುಪಿದರು. ಎಂಟರ ಘಟ್ಟದ ಪಂದ್ಯಗಳಲ್ಲಿ ಗೆದ್ದ ಮರಿಯಾ ರೋನಿ ಹಾಗೂ ಯಶಸ್ವಿನಿ ಘೋರ್ಪಡೆ ಕೂಡ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು.

ಕರ್ನಾಟಕ ರಾಜ್ಯ ಟೇಬಲ್‌ ಟೆನಿಸ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ದಿನವಾದ ಶುಕ್ರವಾರ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಖುಷಿ ವಿ. 11-7,11-7,11-6,11-9ರಿಂದ ಕರುಣಾ ಗಜೇಂದ್ರನ್‌ ಅವರಿಗೆ ಸೋಲುಣಿಸಿದರು. ಅನರ್ಘ್ಯಾ 11-6,11-7,11-5,11-8ರಿಂದ ಕಲ್ಯಾಣಿ ಎದುರು, ಮರಿಯಾ 11-5,11-4,11-5,11-3ರಿಂದ ದೃಷ್ಟಿ ಮೋರೆ ವಿರುದ್ಧ ಹಾಗೂ ಯಶಸ್ವಿನಿ 11-4,11-8,11-7,11-6ರಿಂದ ಅದಿತಿ ಜೋಷಿ ಎದುರು ಗೆದ್ದು ಮುನ್ನಡೆದರು.

ಜೂನಿಯರ್‌ ಬಾಲಕರ ವಿಭಾಗದ ಎಂಟರಘಟ್ಟದ ಹಣಾಹಣಿಗಳಲ್ಲಿ ಸುಜನ್‌ ಆರ್‌. ಭಾರದ್ವಾಜ್‌ 11-1,11-7,11-5,11-2ರಿಂದ ಪ್ರಥರ್ದನ್‌ ಹೆಗ್ಡೆ ಎದುರು, ಸಮ್ಯಕ್‌ ಕಶ್ಯಪ್‌ 11-5,11-4,11-8,11-9ರಿಂದ ಯಶವಂತ್‌ ಪಿ. ವಿರುದ್ಧ, ಪಿ.ವಿ ಶ್ರೀಕಾಂತ್‌ ಕಶ್ಯಪ್‌ 11-5,11-6,11-7,11-3ರಿಂದ ರೋಹಿತ್‌ ಶಂಕರ್‌ ಎದುರು ಹಾಗೂ ಆಕಾಶ್ ಕೆ.ಜೆ. ಅವರು 11-6,11-5,11-4,11-7ರಿಂದ ಪ್ರಣವ್‌ ಶ್ರೀಧರ್‌ ಎದುರು ಜಯಿಸಿ ಸೆಮಿಫೈನಲ್‌ ತಲುಪಿದರು.

ADVERTISEMENT

ಜೂನಿಯರ್‌ ಬಾಲಕಿಯರ ವಿಭಾಗದಲ್ಲಿ ಶ್ವೇತಾ ಪಿ.ಎಂ, ಕರುಣಾ ಗಜೇಂದ್ರನ್‌, ಅದಿತಿ ಜೋಷಿ ಹಾಗೂ ಯಶಸ್ವಿನಿ ಘೋರ್ಪಡೆ ನಾಲ್ಕರ ಘಟ್ಟ ತಲುಪಿದರು. ಶ್ವೇತಾ 14-12,11-5,5-11,14-12,7-11,7-11,11-8ರಿಂದ ತೃಪ್ತಿ ಪುರೋಹಿತ್ ಎದುರು, ಕರುಣಾ 11-6,11-5,11-9,11-9ರಿಂದ ಕಲ್ಯಾಣಿ ವಿರುದ್ಧ, ಅದಿತಿ 7-11,13-11,11-7,7-11,11-9,7-11,11-6ರಿಂದ ಅನರ್ಘ್ಯಾ ಮಂಜುನಾಥ್‌, ಯಶಸ್ವಿನಿ 11-5,12-10,11-13,7-11,11-8,11-7ರಿಂದ ದೇಶ್ನಾ ವಂಶಿಕಾ ವಿರುದ್ಧ ಗೆಲುವು ಸಾಧಿಸಿದರು.

ಪುರುಷರ ಯೂತ್‌ ವಿಭಾಗದ ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಕೌಸ್ತುಭ್‌ ಮಿಲಿಂದ್‌ ಕುಲಕರ್ಣಿ 11-4,11-6,4-11,11-9,8-11,12-10ರಿಂದ ಕೃಷ್ಣ ಎಸ್‌. ಎದುರು, ಆಕಾಶ್‌ ಕೆ.ಜೆ. 11-7,11-9,8-11,4-11,11-7,12-10ರಿಂದ ಸಮರ್ಥ ಕುರಡಿಕೇರಿ ವಿರುದ್ಧ, ಸಮ್ಯಕ್‌ ಕಶ್ಯಪ್‌ 11-5,12-10,11-7,11-5ರಿಂದ ರೋಹನ್‌ ಜಮದಗ್ನಿ ಎದುರು ಹಾಗೂ ಪಿ.ವಿ.ಶ್ರೀಕಾಂತ್‌ ಕಶ್ಯಪ್‌ 11-7,11-5,12-10,4-11,12-10ರಿಂದ ಸೃಜನ್‌ ಭಾರದ್ವಾಜ್‌ ಅವರನ್ನು ಸೋಲಿಸಿದರು.

ಮಹಿಳೆಯರ ಯೂತ್‌ ವಿಭಾಗದಲ್ಲಿ ಖುಷಿ ವಿ. 11-5,11-6,11-7,11-6ರಿಂದ ಅನನ್ಯಾ ಎಚ್‌.ಪಿ ಎದುರು, ಯಶಸ್ವಿನಿ ಘೋರ್ಪಡೆ 11-8,12-10,11-3,11-7ರಿಂದ ಕಲ್ಯಾಣಿ ವಿರುದ್ಧ, ಅನರ್ಘ್ಯಾ ಮಂಜುನಾಥ್‌ 13-11,11-5,11-7,11-6ರಿಂದ ದೇಶ್ನಾ ವಂಶಿಕಾ ಎದುರು, ಕರುಣಾ ಗಜೇಂದ್ರನ್ ಅವರು 11–9, 7-11,11-5,11-6,7-11,9-11,11-8ರಿಂದ ಅದಿತಿ ಜೋಷಿ ಎದುರು ಗೆದ್ದು ಸೆಮಿಫೈನಲ್‌ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.