ADVERTISEMENT

ಟಾಟಾ ಸ್ಟೀಲ್ ಮಾಸ್ಟರ್ಸ್‌ ಚೆಸ್‌: ಪ್ರಜ್ಞಾನಂದಗೆ ಮತ್ತೆ ಸೋಲು

ಪಿಟಿಐ
Published 19 ಜನವರಿ 2026, 13:40 IST
Last Updated 19 ಜನವರಿ 2026, 13:40 IST
ಪ್ರಜ್ಞಾನಂದ
ಫಿಡೆ ವೆಬ್‌ಸೈಟ್ ಚಿತ್ರ
ಪ್ರಜ್ಞಾನಂದ ಫಿಡೆ ವೆಬ್‌ಸೈಟ್ ಚಿತ್ರ   

ವಿಯ್ಕ್ ಆನ್‌ ಝೀ (ನೆದರ್ಲೆಂಡ್ಸ್‌): ಹಾಲಿ ಚಾಂಪಿಯನ್ ಆರ್‌.ಪ್ರಜ್ಞಾನಂದ ಅವರು ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್‌ ಟೂರ್ನಿಯ ಎರಡನೇ ಸುತ್ತಿನಲ್ಲೂ ಹಿನ್ನಡೆ ಕಂಡರು. ಭಾನುವಾರ ನಡೆದ ಪಂದ್ಯದಲ್ಲಿ ಅವರು ಉಜ್ಬೇಕಿಸ್ತಾನದ ಆಟಗಾರ ನೊದಿರ್ಬೆಕ್ ಅಬ್ದುಸತ್ತಾರೋವ್ ಅವರಿಗೆ 31 ನಡೆಗಳಲ್ಲಿ ಮಣಿದರು.

ವಿಶ್ವ ಚಾಂಪಿಯನ್ ಡಿ.ಗುಕೇಶ್‌ ಇನ್ನೊಂದು ಪಂದ್ಯದಲ್ಲಿ ಆತಿಥೇಯ ಡಚ್‌ ಆಟಗಾರ ಜೋರ್ಡಾನ್‌ ವಾನ್‌ ಫೋರೀಸ್ಟ್‌ ಅವರ ಜೊತೆ ಡ್ರಾ ಮಾಡಿಕೊಂಡರು. ಇದು ಅವರಿಗೆ ಸತತ ಎರಡನೇ ಡ್ರಾ.

11 ಸುತ್ತುಗಳ ಈ ಟೂರ್ನಿಯಲ್ಲಿ ಪ್ರಜ್ಞಾನಂದ ಅವರು ಈಗ ಅಂಕಪಟ್ಟಿಯ ತಳದಲ್ಲಿದ್ದಾರೆ. ಎರಡು ಡ್ರಾಗಳ ನಂತರ ಗುಕೇಶ್ ಬಳಿ ಒಂದು ಅಂಕ ಇದೆ.

ADVERTISEMENT

ಶನಿವಾರ ಮೊದಲ ಸುತ್ತಿನಲ್ಲಿ ಪ್ರಜ್ಞಾನಂದ ಅವರನ್ನು ಸೋಲಿಸಿ ಉತ್ತಮ ಆರಂಭ ಮಾಡಿದ್ದ ಅಗ್ರ ಶ್ರೇಯಾಂಕದ ಅರ್ಜುನ್ ಇರಿಗೇಶಿ ಎರಡನೇ ಸುತ್ತಿನಲ್ಲಿ ಝೆಕ್ ರಿಪಬ್ಲಿಕ್‌ನ ಥಾಯ್ ದೈ ವಾನ್ ನೂಯೆನ್ ಅವರ ಮೇಲೆ ಒತ್ತಡ ಹೇರಿದರೂ ಗೆಲ್ಲಲು ಆಗದೇ ಪಾಯಿಂಟ್‌ ಹಂಚಿಕೊಳ್ಳಬೇಕಾಯಿತು.

ಅರ್ಜುನ್ ಈಗ ಒಂದೂವರೆ ಅಂಕ ಸಂಗ್ರಹಿಸಿದ್ದು, ಅಮೆರಿಕದ ಹ್ಯಾನ್ಸ್‌ ನೀಮನ್ ಮತ್ತು ಉಜ್ಬೇಕ್ ಆಟಗಾರ ಅಬ್ದುಸತ್ತಾರೋವ್ ಅವರೊಂದಿಗೆ ಮುನ್ನಡೆ ಹಂಚಿಕೊಂಡಿದ್ದಾರೆ.

ಭಾರತದ ಮತ್ತೊಬ್ಬ ಆಟಗಾರ ಅರವಿಂದ ಚಿದಂಬರಮ್ (1 ಅಂಕ) ಅವರು ಟರ್ಕಿಯ ಯಾಗಿಝ್ ಖಾನ್ ಎರ್ಡೊಗ್ಮಸ್‌ (1 ಅಂಕ) ಜೊತೆ ಡ್ರಾ ಮಾಡಿಕೊಂಡರು. ಅರವಿಂದ ಅವರಿಗೆ ಇದು ಎರಡನೇ ಡ್ರಾ.

ಇತರ ಪಂದ್ಯಗಳಲ್ಲಿ ಜರ್ಮನಿಯ ಮಥಾಯಸ್‌ ಬ್ಲೂಬಾಮ್ (1 ಅಂಕ) ಅವರು ಅಮೆರಿಕದ ಹ್ಯಾನ್ಸ್‌ ನೀಮನ್ (1.5) ಜೊತೆ, ಅನಿಶ್ ಗಿರಿ (0.5), ಉಜ್ಬೇಕಿಸ್ತಾನದ ಜಾವೊಖಿರ್ ಸಿಂದರೋವ್ (1) ಜೊತೆ ಡ್ರಾ ಮಾಡಿಕೊಂಡರು. ಸ್ಲೊವೇನಿಯಾದ ವ್ಲಾದಿಮೀರ್ ಫೆಡೋಸಿವ್ (1) ಅವರು ಜರ್ಮನಿಯ ವಿನ್ಸೆಂಟ್ ಕೀಮರ್ (1) ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.