ADVERTISEMENT

ಥಾಮಸ್ ಮತ್ತು ಉಬರ್ ಕಪ್‌ ಟೂರ್ನಿಗಳಿಗೆ ಥಾಯ್ಲೆಂಡ್ ಆಟಗಾರರು ಇಲ್ಲ

ಏಜೆನ್ಸೀಸ್
Published 7 ಸೆಪ್ಟೆಂಬರ್ 2020, 11:14 IST
Last Updated 7 ಸೆಪ್ಟೆಂಬರ್ 2020, 11:14 IST
ರಚನಾಕ್ ಇಂಟನಾನ್ -ರಾಯಿಟರ್ಸ್ ಚಿತ್ರ
ರಚನಾಕ್ ಇಂಟನಾನ್ -ರಾಯಿಟರ್ಸ್ ಚಿತ್ರ   

ಬ್ಯಾಂಕಾಕ್: ಮುಂದಿನ ತಿಂಗಳಲ್ಲಿ ನಡೆಯಲಿರುವ ಥಾಮಸ್ ಮತ್ತು ಉಬರ್ ಕಪ್ ಬ್ಯಾಡ್ಮಿಂಟ‌ನ್ ಟೂರ್ನಿಗೆ ಆಟಗಾರರನ್ನು ಕಳುಹಿಸದೇ ಇರಲು ಥಾಯ್ಲೆಂಡ್ ಬ್ಯಾಡ್ಮಿಂಟನ್ ಫೆಡರೇಷನ್ ನಿರ್ಧರಿಸಿದೆ. ಕೋವಿಡ್‌ –19ರ ಆತಂಕದಿಂದ ಪ್ರಮುಖ ಆಟಗಾರರು ಟೂರ್ನಿಯಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ. ಆದ್ದರಿಂದ ತಂಡವನ್ನು ಕಳುಹಿಸದೇ ಇರಲು ನಿರ್ಧರಿಸಲಾಗಿದೆ ಎಂದು ಫೆಡರೇಷನ್ ತಿಳಿಸಿದೆ.

ಮಾಜಿ ವಿಶ್ವ ಚಾಂಪಿಯನ್ ರಚನಾಕ್ ಇಂಟನಾನ್, ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಮಿಶ್ರ ಡಬಲ್ಸ್ ಜೋಡಿ ದೇಚಪೋಲ್ ಪುರಂಕ್ರೊಹ್ ಮತ್ತು ಸಪ್ಸೈರ್ ತರೆಟನಾಚಿ ಮತ್ತಿತರರು ಸದ್ಯ ಕಣಕ್ಕೆ ಇಳಿಯದೇ ಇರಲು ನಿರ್ಧರಿಸಿದ್ದಾರೆ.

’ಆಟಗಾರರ ಆರೋಗ್ಯ ಮತ್ತು ಸುರಕ್ಷತೆ ನಮಗೆ ಎಲ್ಲಕ್ಕಿಂತ ಮುಖ್ಯ. ಆದ್ದರಿಂದ ಅವರು ತೆಗೆದುಕೊಂಡಿರುವ ನಿರ್ಧಾರವನ್ನು ಮನ್ನಿಸಿ ಟೂರ್ನಿಗೆ ತಂಡವನ್ನು ಕಳುಹಿಸದೇ ಇರಲು ನಿರ್ಧರಿಸಲಾಗಿದೆ‘ ಎಂದು ಫೆಡರೇಷನ್ ಅಧ್ಯಕ್ಷ ಕುನಿಂಗ್ ಪಟಾಮ ಲೀಸ್ವಾಟ್ರಕುಲ್ ತಿಳಿಸಿದ್ದಾರೆ.

ADVERTISEMENT

ಅಕ್ಟೋಬರ್ ಮೂರರಿಂದ 11ರ ವರೆಗೆ ಡೆನ್ಮಾರ್ಕ್‌ನಲ್ಲಿ ಟೂರ್ನಿ ನಡೆಯಲಿದೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.