ADVERTISEMENT

ರೈಫಲ್‌ ಶೂಟಿಂಗ್‌: ತಿಲೋತ್ತಮಾ ಚಾಂಪಿಯನ್‌

ಪಿಟಿಐ
Published 20 ಜನವರಿ 2026, 14:14 IST
Last Updated 20 ಜನವರಿ 2026, 14:14 IST
ಮಹಿಳೆಯರ 50 ಮೀಟರ್‌ ರೈಫಲ್‌ 3 ಪೊಸಿಷನ್‌ನಲ್ಲಿ ಪದಕ ಗೆದ್ದವರು. ಮಧ್ಯಪ್ರದೇಶದ ಆಶಿ ಚೌಕ್ಸ್ಕಿ (ಬೆಳ್ಳಿ), ಕರ್ನಾಟಕದ ತಿಲೋತ್ತಮಾ ಸೇನ್‌ (ಚಿನ್ನ) ಮತ್ತು ರಾಜಸ್ಥಾನದ ಮಾನಿನಿ ಕೌಶಿಕ್ (ಕಂಚು)
ಮಹಿಳೆಯರ 50 ಮೀಟರ್‌ ರೈಫಲ್‌ 3 ಪೊಸಿಷನ್‌ನಲ್ಲಿ ಪದಕ ಗೆದ್ದವರು. ಮಧ್ಯಪ್ರದೇಶದ ಆಶಿ ಚೌಕ್ಸ್ಕಿ (ಬೆಳ್ಳಿ), ಕರ್ನಾಟಕದ ತಿಲೋತ್ತಮಾ ಸೇನ್‌ (ಚಿನ್ನ) ಮತ್ತು ರಾಜಸ್ಥಾನದ ಮಾನಿನಿ ಕೌಶಿಕ್ (ಕಂಚು)   

ನವದೆಹಲಿ: ರಾಷ್ಟ್ರೀಯ ಚಾಂಪಿಯನ್‌, ಕರ್ನಾಟಕದ ಶೂಟರ್‌ ತಿಲೋತ್ತಮಾ ಸೇನ್‌ ಅವರು ಇಲ್ಲಿನ ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್ ಟಿ–1 (ಗ್ರೂಪ್‌ ಎ) ಮಹಿಳೆಯರ 50 ಮೀಟರ್‌ ರೈಫಲ್‌ 3 ಪೊಸಿಷನ್‌ನಲ್ಲಿ ಅಗ್ರಸ್ಥಾನ ಪಡೆದರು. 

ಈಚೆಗೆ ನಡೆದ 68ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ 11 ಪದಕಗಳನ್ನು ಗೆದ್ದ ತಿಲೋತ್ತಮಾ ಅವರು ಕೇವಲ 0.6 ಸ್ಕೋರ್‌ ಅಂತರದಿಂದ ಮಧ್ಯಪ್ರದೇಶದ ಆಶಿ ಚೌಕ್ಸ್ಕಿ ಅವರನ್ನು ಹಿಂದಿಕ್ಕಿದರು. ಕರ್ನಾಟಕದ ಶೂಟರ್ 360.1 ಸ್ಕೋರ್‌ ಗಳಿಸಿದರು. ಆಶಿ (359.5), ರಾಜಸ್ಥಾನದ ಮಾನಿನಿ ಕೌಶಿಕ್ (347.5) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.

ಇದಕ್ಕೂ ಮೊದಲು ತಿಲೋತ್ತಮಾ (594) ಮತ್ತು ಆಶಿ (592) ಅವರು ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದರು.

ADVERTISEMENT

ಪುರುಷರ 50 ಮೀಟರ್‌ ರೈಫಲ್‌ 3 ಪೊಸಿಷನ್‌ ಸ್ಪರ್ಧೆಯಲ್ಲಿ ನೌಕಾಪಡೆಯ ನೀರಜ್ ಕುಮಾರ್ ಪ್ರಥಮ ಸ್ಥಾನ ಗಳಿಸಿದರು. 25 ಮೀಟರ್ ರ‍್ಯಾಪಿಡ್ ಫೈರ್ ಪಿಸ್ತೂಲ್ ಟಿ–1 ಸ್ಪರ್ಧೆಯಲ್ಲಿ ಪಂಜಾಬ್‌ನ ರಾಜ್‌ಕನ್ವರ್ ಸಿಂಗ್ ಸಂಧು ಅಗ್ರಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.