
ಮಂಗಳೂರು: ಬಿಗ್ ಬೀಟರ್ಸ್ ಮತ್ತು ಎಸ್.ಆರ್ ಸ್ಟ್ರೈಕರ್ಸ್ ತಂಡಗಳು ನಗರದಲ್ಲಿ ಶನಿವಾರ ಆರಂಭಗೊಂಡ ತುಳುನಾಡು ನಮ್ಮ ಪ್ರೀಮಿಯರ್ ಲೀಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೇಲುಗೈ ಸಾಧಿಸಿದವು.
ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದಲ್ಲಿ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ‘ಬಿ’ ಗುಂಪಿನಲ್ಲಿ ಬಿಗ್ ಬೀಟರ್ಸ್ ತಂಡ ಮತ್ಸ್ಯರಾಜ್ ಮಲ್ಪೆ ವಿರುದ್ಧ 4–3ರಲ್ಲಿ ಜಯ ಗಳಿಸಿತು. ‘ಎ’ ಗುಂಪಿನಲ್ಲಿ ಎಸ್.ಆರ್ ಸ್ಟ್ರೈಕರ್ಸ್ 4–3ರಲ್ಲಿ ಫೆದರ್ ಫೈಟರ್ಸ್ ವಿರುದ್ಧ ಗೆದ್ದಿತು.
‘ಎ’ ಗುಂಪಿನ ಮತ್ತೊಂದು ಹಣಾಹಣಿಯಲ್ಲಿ ಎಲ್‌ಎಸ್‌ಎಂ ಇಂಡಿಯನ್ಸ್ ತಂಡ ವೀರ್ ಗೋಲ್ಡನ್ ಈಗಲ್ಸ್ ಎದುರು 4–3ರ ಗೆಲುವು ದಾಖಲಿಸಿತು. ‘ಬಿ’ ಗುಂಪಿನಲ್ಲಿ ಡೇರಿಂಗ್ ಜಾಗ್ವಾರ್ಸ್ 4–3ರಲ್ಲಿ ನ್ಯಾಷನಲ್ ಸ್ಮ್ಯಾಷರ್ಸ್ ತಂಡವನ್ನು ಮಣಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.