ADVERTISEMENT

ಟೋಕಿಯೊ ಒಲಿಂಪಿಕ್ಸ್ ರದ್ದತಿಗೆ ಜಪಾನ್‌ ವೈದ್ಯರ ಸಲಹೆ

ಏಜೆನ್ಸೀಸ್
Published 18 ಮೇ 2021, 15:27 IST
Last Updated 18 ಮೇ 2021, 15:27 IST
ಒಲಿಂಪಿಕ್ಸ್‌ ಆಯೋಜನೆಗೆ ವಿರೋಧ ವ್ಯಕ್ತಪಡಿಸಿ ಟೋಕಿಯೊದಲ್ಲಿ ಮಂಗಳವಾರ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಒಲಿಂಪಿಕ್ಸ್‌ ಲಾಂಛನಕ್ಕೆ ಭದ್ರತೆ ನೀಡಿದ ಸಿಬ್ಬಂದಿ –ಎಎಫ್‌ಪಿ ಚಿತ್ರ
ಒಲಿಂಪಿಕ್ಸ್‌ ಆಯೋಜನೆಗೆ ವಿರೋಧ ವ್ಯಕ್ತಪಡಿಸಿ ಟೋಕಿಯೊದಲ್ಲಿ ಮಂಗಳವಾರ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಒಲಿಂಪಿಕ್ಸ್‌ ಲಾಂಛನಕ್ಕೆ ಭದ್ರತೆ ನೀಡಿದ ಸಿಬ್ಬಂದಿ –ಎಎಫ್‌ಪಿ ಚಿತ್ರ   

ಟೋಕಿಯೊ: ಒಲಿಂಪಿಕ್ಸ್ ಕೂಟವನ್ನು ರದ್ದು ಮಾಡುವುದು ಒಳಿತು ಎಂದು ಜಪಾನ್‌ನ ವೈದ್ಯರ ಬಳಗ ಸಲಹೆ ನೀಡಿದೆ. ವೈದ್ಯಕೀಯ ವಲಯದವರು ಕ್ರೀಡಾಕೂಟದಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಲು ಮುಂದಾಗಬೇಕು ಎಂದು ಆಯೋಜಕರು ಪದೇ ಪದೇ ಕೋರಿಕೊಂಡ ಬೆನ್ನಲ್ಲೇ ಈ ನಿರ್ಧಾರವನ್ನು ವೈದ್ಯರು ಪ್ರಕಟಿಸಿದ್ದಾರೆ.

ಕೋವಿಡ್‌ನಿಂದಾಗಿ ಮುಂದೂಡಲಾಗಿರುವ ಟೋಕಿಯೊ ಒಲಿಂಪಿಕ್ಸ್‌ ಆರಂಭವಾಗಲು ಹತ್ತು ವಾರ ಮಾತ್ರ ಬಾಕಿ ಇದೆ. ಜಪಾನ್‌ನಲ್ಲಿ ಇತ್ತೀಚೆಗೆ ಕೋವಿಡ್ ಏರುಗತಿಯಲ್ಲಿ ಸಾಗುತ್ತಿದೆ. ಇಂಥ ಸಂದರ್ಭದಲ್ಲೇ ವೈದ್ಯರು ಕ್ರೀಡಾಕೂಟದ ವಿರುದ್ಧ ಹೇಳಿಕೆ ನೀಡಿರುವುದು ಆಯೋಜಕರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

‘ಕೋವಿಡ್‌ ನಾಲ್ಕನೇ ಅಲೆ ಗಂಭೀರವಾಗಿದೆ. ಅದರ ವಿರುದ್ಧ ತೀವ್ರ ಹೋರಾಟ ನಡೆಯುತ್ತಿದೆ. ಒಲಿಂಪಿಕ್ಸ್ ನಡೆದರೆ ಇಲ್ಲಿ ರೋಗ ಇನ್ನಷ್ಟು ಪಸರಿಸಲಿದ್ದು ಸಾವಿನ ಸಂಖ್ಯೆಯೂ ಹೆಚ್ಚಾಗಲಿದೆ’ ಎಂದು ಟೋಕಿಯೊದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರು ಸಾವಿರಕ್ಕೂ ಅಧಿಕ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.