ADVERTISEMENT

ಒಲಿಂಪಿಕ್ಸ್‌: ವೆಚ್ಚದ ಲೆಕ್ಕದ ಸಂಕಟ

ಕ್ರೀಡಾಕೂಟದ ನೆಪದಲ್ಲಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ನಿರ್ಧಾರ; ಸಮಿತಿ ತಕರಾರು

ಏಜೆನ್ಸೀಸ್
Published 20 ಡಿಸೆಂಬರ್ 2018, 19:40 IST
Last Updated 20 ಡಿಸೆಂಬರ್ 2018, 19:40 IST
ಟೋಕಿಯೊ ಒಲಿಂಪಿಕ್ಸ್‌ಗಾಗಿ ನಿರ್ಮಾಣವಾಗುತ್ತಿರುವ ಕ್ರೀಡಾ ಗ್ರಾಮ –ಎಎಫ್‌ಪಿ
ಟೋಕಿಯೊ ಒಲಿಂಪಿಕ್ಸ್‌ಗಾಗಿ ನಿರ್ಮಾಣವಾಗುತ್ತಿರುವ ಕ್ರೀಡಾ ಗ್ರಾಮ –ಎಎಫ್‌ಪಿ   

ಟೋಕಿಯೊ: ಮುಂದಿನ ಒಲಿಂಪಿಕ್ಸ್‌ಗೆ ಇನ್ನು ಬಾಕಿ ಇರುವುದ ಒಂದು ವರ್ಷ ಮಾತ್ರ. ಆದರೆ ಕ್ರೀಡಾಕೂಟದ ನೆಪದಲ್ಲಿ ದೇಶದಲ್ಲಿ ಏನೇನು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಇನ್ನೂ ಸರಿಯಾದ ನಿರ್ಧಾರ ಆಗಲಿಲ್ಲ. ವೆಚ್ಚದ ಕುರಿತ ಲೆಕ್ಕಾಚಾರ ಪೂರ್ಣಗೊಳ್ಳದೇ ಇರುವುದು ಇದಕ್ಕೆ ಮುಖ್ಯ ಕಾರಣ.

ಜಪಾನ್‌ನ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನ ವೆಚ್ಚದ ಮೊದಲ ಹಂತದ ಮಾಹಿತಿಯನ್ನು ಕಳೆದ ಬಾರಿ ಬಿಡುಗಡೆ ಮಾಡಲಾಗಿತ್ತು. ಆಗ ಅದು 1.35 ಟ್ರಿಲಿಯನ್ ಯೆನ್‌ (₹ 84 ಸಾವಿರ ಕೋಟಿ) ಆಗಿತ್ತು. ಶುಕ್ರವಾರ ಮತ್ತೊಂದು ಸುತ್ತಿನ ಮಾಹಿತಿಯನ್ನು ಆಯೋಜಕರು ಬಿಡುಗಡೆ ಮಾಡಲಿದ್ದಾರೆ. ಈ ಹಿಂದೆ ತೋರಿಸಿದ ಮೊತ್ತಕ್ಕಿಂತ ಹೆಚ್ಚು ವ್ಯಯ ಮಾಡುವ ಸಾಧ್ಯತೆ ಇಲ್ಲ ಎಂದು ಆಯೋಜಕರು ಈಗಾಗಲೇ ತಿಳಿಸಿದ್ದಾರೆ. ಆದರೂ ಈಗ ಕುತೂಹಲ ಗರಿಗೆದರಿದೆ.

‘ಯಾವುದೇ ಕಾರಣಕ್ಕೂ ಈ ಹಿಂದೆ ಹೇಳಿದ ಮೊತ್ತಕ್ಕಿಂತ ಹೆಚ್ಚು ಮೊತ್ತವನ್ನು ವ್ಯಯಿಸಲು ಇಷ್ಟಪಡುವುದಿಲ್ಲ’ ಎಂದು ಟೋಕಿಯೊ ಒಲಿಂಪಿಕ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತೋಶಿರೊ ಮುಟೊ ತಿಳಿಸಿದ್ದಾರೆ.

ADVERTISEMENT

ಆದರೆ ಟೋಕಿಯೊ ನಗರ ಆಡಳಿತ ಮತ್ತು ಜಪಾನ್ ಸರ್ಕಾರ ಬೇರೆಯೇ ಲೆಕ್ಕ ಹಾಕಿದೆ. ಒಲಿಂಪಿಕ್ಸ್ ನೆಪದಲ್ಲಿ ಹೊಸ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಆದ್ದರಿಂದ ಕಾರಣ ಬಜೆಟ್‌ ಮೊತ್ತ ಹೆಚ್ಚಾಗಲಿದೆ ಎಂಬುದು ತಜ್ಞರ ಅನಿಸಿಕೆ.

ಅಕ್ಟೋಬರ್‌ನಲ್ಲಿ ದೇಶದ ಲೆಕ್ಕಾಧಿಕಾರಿ ಸಲ್ಲಿಸಿರುವ ವರದಿಯಲ್ಲಿ 286 ಯೋಜನೆಗಳ ಮಾಹಿತಿ ಇದೆ. ಹವಾಮಾನ ಮುನ್ಸೂಚನೆಯ ಉಪಗ್ರಹದ ನಿರ್ವಹಣೆಯಿಂದ ಹಿಡಿದು ಹೈಡ್ರಾಜನ್ ಘಟಕದ ಸ್ಥಾಪನೆಯಂಥ ಕಾರ್ಯಕ್ರಮಗಳು ಇದರಲ್ಲಿ ಅಡಕವಾಗಿವೆ. ಇಂಥ ಯೋಜನೆಗಳು ಒಲಿಂಪಿಕ್ಸ್‌ ಜೊತೆ ನೇರ ಸಂಬಂಧ ಹೊಂದಿಲ್ಲ ಎಂದು ಒಲಿಂಪಿಕ್ ಸಮಿತಿ ತಕರಾರು ಎತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.