ADVERTISEMENT

Tokyo Olympics: ನೀರಜ್ ಸಾಧನೆ ಸಮಗಟ್ಟುವಲ್ಲಿ ವಿಫಲ, ಶಿವಪಾಲ್ ನಿರ್ಗಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2021, 3:58 IST
Last Updated 4 ಆಗಸ್ಟ್ 2021, 3:58 IST
ಶಿವಪಾಲ್ ಸಿಂಗ್
ಶಿವಪಾಲ್ ಸಿಂಗ್    

ಟೋಕಿಯೊ: ಒಲಿಂಪಿಕ್ಸ್ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ಭಾರತದ ಅಗ್ರ ಸ್ಪರ್ಧಿ ನೀರಜ್ ಚೋಪ್ರಾ ಸಾಧನೆಯನ್ನು ಸಮಗಟ್ಟುವಲ್ಲಿ ವಿಫಲರಾಗಿರುವ ಶಿವಪಾಲ್ ಸಿಂಗ್, ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫರಾಗಿದ್ದಾರೆ.

'ಬಿ' ಗುಂಪಿನಲ್ಲಿ ಸ್ಪರ್ಧಿಸಿದ್ದ ಶಿವಪಾಲ್ ಸಿಂಗ್ ಮೂರು ಪ್ರಯತ್ನಗಳಲ್ಲಿ ಕ್ರಮವಾಗಿ 76.40, 74.80 ಹಾಗೂ 74.81 ಮೀಟರ್ ದೂರ ಜಾವೆಲಿನ್ ಎಸೆದರು.

ಅರ್ಹತಾ ಸುತ್ತಿನಲ್ಲಿ ಒಟ್ಟು 31 ಅಥ್ಲೀಟ್‌ಗಳು ಭಾಗವಹಿಸಿದ್ದು, ಫೈನಲ್ಸ್‌ಗೆ ಅಗ್ರ 12 ಅಥ್ಲೀಟ್‌ಗಳು ಅರ್ಹತೆ ಪಡೆದಿದ್ದಾರೆ.

ADVERTISEMENT

ಭಾರತದ ಎರಡನೇ ಶ್ರೇಷ್ಠ ಜಾವೆಲಿನ್ ಎಸೆತಗಾರ ಶಿವಪಾಲ್ ಗರಿಷ್ಠ 76.40 ಮೀಟರ್ ದೂರ ಜಾವೆಲಿನ್ ಎಸೆದರೂ ಇದು ಫೈನಲ್‌ಗೆ ಪ್ರವೇಶಿಸಲು ಸಾಕಾಗಲಿಲ್ಲ.

'ಎ' ಗುಂಪಿನ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿರುವ ನೀರಜ್ ಚೋಪ್ರಾ, ಮೊದಲ ಪ್ರಯತ್ನದಲ್ಲಿಯೇ 86.5 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ನೇರವಾಗಿ ಫೈನಲ್ಸ್‌ಗೆ ಅರ್ಹತೆ ಪಡೆದರು.

ಅತ್ತ 'ಬಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಪಾಕಿಸ್ತಾನದ ಆರ್ಶದ್ ನದೀಮ್ 85.16 ದೂರ ಜಾವೆಲಿನ್ ಎಸೆಯುವ ಮೂಲಕ ಫೈನಲ್‌ಗೆ ಪ್ರವೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.