ADVERTISEMENT

Tokyo Olympics: ಚೀನಾದ ಜಾಂಗ್‌ಗೆ ಶೂಟಿಂಗ್‌ ಚಿನ್ನ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 18:44 IST
Last Updated 2 ಆಗಸ್ಟ್ 2021, 18:44 IST
ಚಿನ್ನದ ಪದಕದೊಂದಿಗೆ ಜಾಂಗ್‌ ಚಾಂಗೊಂಗ್‌ ಸಂಭ್ರಮ –ರಾಯಿಟರ್ಸ್‌ ಚಿತ್ರ
ಚಿನ್ನದ ಪದಕದೊಂದಿಗೆ ಜಾಂಗ್‌ ಚಾಂಗೊಂಗ್‌ ಸಂಭ್ರಮ –ರಾಯಿಟರ್ಸ್‌ ಚಿತ್ರ   

ಟೋಕಿಯೊ: ಚೀನಾದ ಜಾಂಗ್‌ ಚಾಂಗೊಂಗ್‌ ಅವರು ಪುರುಷರ 50 ಮೀಟರ್ಸ್‌ ರೈಫಲ್‌ 3 ಪೊಷಿಸನ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.

ಸೋಮವಾರ ನಡೆದ ಫೈನಲ್‌ನಲ್ಲಿ ಅವರು 466.0 ಪಾಯಿಂಟ್ಸ್‌ ಕಲೆಹಾಕಿ ಒಲಿಂಪಿಕ್ಸ್‌ ದಾಖಲೆ ಸರಿಗಟ್ಟಿದರು.

ರಷ್ಯಾ ಒಲಿಂಪಿಕ್‌ ಸಮಿತಿಯ ಸರ್ಜಿ ಕಮೆನ್‌ಸ್ಕಿ ಬೆಳ್ಳಿ ಪಡೆದರು. ಅವರು 464.2 ಪಾಯಿಂಟ್ಸ್‌ ಗಳಿಸಿದರು. ಸರ್ಬಿಯಾದ ಸೆಬಿಚ್‌ ಮಿಲೆಂಕೊ (448.2) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ADVERTISEMENT

ಭಾರತದ ಸ್ಪರ್ಧಿಗಳ ವೈಫಲ್ಯ: ಈ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಐಶ್ವರ್ಯ ಪ್ರತಾಪ್‌ ಸಿಂಗ್‌ ತೋಮರ್‌ ಮತ್ತು ಸಂಜೀವ್‌ ರಾಜಪೂತ್‌ ಫೈನಲ್‌ಗೆ ಅರ್ಹತೆ ಗಳಿಸಲು ವಿಫಲರಾದರು. ಅರ್ಹತಾ ಸುತ್ತಿನಲ್ಲಿ ತೋಮರ್‌ 21ನೇ ಸ್ಥಾನ ಗಳಿಸಿದರೆ, ರಾಜಪೂತ್‌ 32ನೇ ಸ್ಥಾನದೊಂದಿಗೆ ಹೋರಾಟ ಮುಗಿಸಿದರು.

ಹೀಗಾಗಿ ಈ ಬಾರಿ ಶೂಟಿಂಗ್‌ನಲ್ಲಿ ಭಾರತಕ್ಕೆ ಪದಕ ಮರೀಚಿಕೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.