ADVERTISEMENT

Tokyo Olympics: ಕುಸ್ತಿಯಲ್ಲಿ ಬೆಳ್ಳಿ ಗೆದ್ದ ಭಾರತದ ರವಿ ದಹಿಯಾ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 12:04 IST
Last Updated 5 ಆಗಸ್ಟ್ 2021, 12:04 IST
ರವಿಕುಮಾರ್ ದಹಿಯಾ
ರವಿಕುಮಾರ್ ದಹಿಯಾ   

ಚಿಬಾ (ಜಪಾನ್‌): ಟೋಕಿಯೊ ಒಲಿಂಪಿಕ್ಸ್‌ ಕುಸ್ತಿ ವಿಭಾಗದಲ್ಲಿ ಫೈನಲ್‌ನಲ್ಲಿ ಸೋಲು ಅನುಭವಿಸಿರುವ ಭಾರತದ ರವಿಕುಮಾರ್ ದಹಿಯಾ, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಗುರುವಾರ ನಡೆದ ಪುರುಷರ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ರವಿಕುಮಾರ್, ವಿಶ್ವ ಚಾಂಪಿಯನ್‌, ರಷ್ಯಾದ ಜವೂರ್ ಉಗುವೆ 4-7ರಲ್ಲಿಎದುರು ಸೋಲು ಅನುಭವಿಸಿದರು.

ಹಾಗಿದ್ದರೂ ಒಲಿಂಪಿಕ್ಸ್‌ ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದಿರುವ ರವಿಕುಮಾರ್ ದಹಿಯಾ, ಸುಶೀಲ್ ಕುಮಾರ್ ಸಾಧನೆ ಸರಿಗಟ್ಟಿದ್ದಾರೆ. 2012ರಲ್ಲಿ ಸುಶೀಲ್ ಕುಮಾರ್ ಫೈನಲ್‌ನಲ್ಲಿ ಸೋತು ಬೆಳ್ಳಿ ಪದಕ ಗೆದ್ದಿದ್ದರು. ಸುಶೀಲ್ ಒಟ್ಟು ಎರಡು ಪದಕಗಳ (ಬೆಳ್ಳಿ ಮತ್ತು ಕಂಚು) ಸಾಧನೆ ಮಾಡಿದ್ದರು.

ಒಟ್ಟಿನಲ್ಲಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುತ್ತಿರುವ ಭಾರತದ ಐದನೇ ಕುಸ್ತಿಪಟು ಎಂಬ ಹಿರಿಮೆಗೂ ಭಾಜನರಾದರು. ಒಟ್ಟಾರೆಯಾಗಿ ಒಲಿಂಪಿಕ್ಸ್ ಕುಸ್ತಿಯಲ್ಲಿ ಭಾರತಕ್ಕೆ ಆರನೇ ಪದಕ ಒಲಿದು ಬಂದಿದೆ.

ಒಲಿಂಪಿಕ್ಸ್ ಕುಸ್ತಿಯಲ್ಲಿ ಪದಕ ಗೆದ್ದ ಭಾರತೀಯರು:
ಕೆ.ಡಿ. ಜಾಧವ್ (ಕಂಚು,1952),
ಸುನಿಲ್ ಕುಮಾರ್ (ಕಂಚು, 2008 ಮತ್ತು ಬೆಳ್ಳಿ 2012),
ಯೋಗೇಶ್ವರ್ ದತ್ (ಕಂಚು, 2012),
ಸಾಕ್ಷಿ ಮಲಿಕ್ (ಕಂಚು, 2016)
ರವಿಕುಮಾರ್ ದಹಿಯಾ (2021, ಬೆಳ್ಳಿ)

ಸೆಮಿಫೈನಲ್‌ಗೆ ಸಮಾನವಾಗಿ ಆರಂಭದಲ್ಲೇ ಹಿನ್ನಡೆ ಅನುಭವಿಸಿದ ದಹಿಯಾ, ಕೊನೆಯ ಕ್ಷಣದ ವರೆಗೂ ದಿಟ್ಟ ಹೋರಾಟ ತೋರಿದರೂ ಆಗಲೇ ಕಾಲ ಕೈಮೀರಿ ಹೋಗಿತ್ತು. ಅಂತಿಮವಾಗಿ 4-7ರ ಅಂತರದಲ್ಲಿ ಸೋಲು ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.