ADVERTISEMENT

ಟಾಪ್ಸ್‌ ಯೋಜನೆಗೆ ಬೋಪಣ್ಣ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 17:17 IST
Last Updated 13 ಡಿಸೆಂಬರ್ 2018, 17:17 IST
ರೋಹನ್‌ ಬೋಪಣ್ಣ
ರೋಹನ್‌ ಬೋಪಣ್ಣ   

ನವದೆಹಲಿ: ಕರ್ನಾಟಕದ ಅನುಭವಿ ಟೆನಿಸ್‌ ಆಟಗಾರ ರೋಹನ್‌ ಬೋಪಣ್ಣ ಮತ್ತು ದಿವಿಜ್‌ ಶರಣ್‌ ಅವರನ್ನು ಗುರುವಾರ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌), ಟಾರ್ಗೆಟ್‌ ಒಲಿಂಪಿಕ್ಸ್‌ ಪೋಡಿಯಮ್‌ ಯೋಜನೆಗೆ (ಟಾಪ್ಸ್‌) ಆಯ್ಕೆ ಮಾಡಿದೆ.

ಮನು ಭಾಕರ್‌ ಮತ್ತು ಸೌರಭ್ ಚೌಧರಿ ಸೇರಿದಂತೆ ಒಟ್ಟು ಎಂಟು ಮಂದಿ ಶೂಟರ್‌ಗಳು, ಟೇಬಲ್‌ ಟೆನಿಸ್‌ ಪಟುಗಳಾದ ಮಣಿಕಾ ಬಾತ್ರಾ, ಅಚಂತಾ ಶರತ್‌ ಕಮಲ್‌ ಮತ್ತು ಜಿ.ಸತ್ಯನ್‌ ಅವರ ಹೆಸರುಗಳನ್ನೂ ಈ ಯೋಜನೆಗೆ ಸೇರಿಸಲಾಗಿದೆ.

ರೋಹನ್‌ ಮತ್ತು ದಿವಿಜ್‌ ಅವರು ಈ ಬಾರಿಯ ಏಷ್ಯನ್‌ ಕ್ರೀಡಾಕೂಟದ ಪುರುಷರ ಡಬಲ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು.

ADVERTISEMENT

ಭಾಕರ್‌ ಮತ್ತು ಸೌರಭ್‌ ಅವರು ಅರ್ಜೆಂಟೀನಾದ ಬ್ಯೂನಸ್‌ ಐರಿಸ್‌ನಲ್ಲಿ ನಡೆದಿದ್ದ ಯೂತ್ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗಗಳಲ್ಲಿ ಚಿನ್ನದ ಸಾಧನೆ ಮಾಡಿದ್ದರು.

ಹೃದಯ್‌ ಹಜಾರಿಕಾ ಮತ್ತು ದಿವ್ಯಾಂಶು ಪನ್ವಾರ್‌ (ಇಬ್ಬರೂ ಪುರುಷರ 10 ಮೀ. ಏರ್‌ ರೈಫಲ್‌), ಶ್ರೇಯಾ ಅಗರವಾಲ್‌ (ಮಹಿಳೆಯರ 10 ಮೀ.ಏರ್‌ ರೈಫಲ್‌), ಐಶ್ವರ್ಯ ಪ್ರತಾಪ್‌ ತೋಮರ್‌ (ಪುರುಷರ 50 ಮೀ. ರೈಫಲ್‌ 3 ಪೊಷಿಸನ್‌), ಇಶಾ ಸಿಂಗ್‌ (10 ಮೀ. ಏರ್‌ ಪಿಸ್ತೂಲ್‌) ಮತ್ತು ಮನೀಷಾ ಕೀರ್‌ (ಮಹಿಳೆಯರ ಟ್ರ್ಯಾಪ್‌) ಟಾಪ್ಸ್‌ ಯೋಜನೆಗೆ ಸೇರ್ಪಡೆಗೊಂಡ ಇತರ ಶೂಟರ್‌ಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.