ADVERTISEMENT

ಭಾರತ ಟ್ರ್ಯಾಪ್ ತಂಡಗಳಿಗೆ ಬೆಳ್ಳಿ

ಸುಹ್ಲ್‌ ಜೂನಿಯರ್ ವಿಶ್ವಕಪ್‌ ಶೂಟಿಂಗ್‌

ಪಿಟಿಐ
Published 14 ಮೇ 2022, 13:16 IST
Last Updated 14 ಮೇ 2022, 13:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಐಎಸ್‌ಎಸ್‌ಎಫ್‌ ಜೂನಿಯರ್ ಶೂಟಿಂಗ್ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿವೆ.

ಜರ್ಮನಿಯ ಸುಹ್ಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತ ಇದುವರೆಗೆ ಎಂಟು ಚಿನ್ನ ಮತ್ತು ಎಂಟು ಬೆಳ್ಳಿ ಪದಕಗಳೊಂದಿಗೆ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ. ಆಸ್ಟ್ರೇಲಿಯಾ ಮತ್ತು ಅಮೆರಿಕ ತಂಡಗಳು ಜಂಟಿ ಎರಡನೇ ಸ್ಥಾನದಲ್ಲಿವೆ.

ಪ್ರೀತಿ ರಾಜಕ್‌, ಸಬೀರಾ ಹ್ಯಾರಿಸ್‌ ಮತ್ತು ಭವ್ಯಾ ತ್ರಿಪಾಠಿ ಅವರನ್ನೊಳಗೊಂಡ ಭಾರತದ ಮಹಿಳಾ ಟ್ರ್ಯಾಪ್ ವಿಭಾಗದ ತಂಡವು ಚಿನ್ನದ ಪದಕದ ಸುತ್ತಿನಲ್ಲಿ 2–6ರಿಂದ ಇಟಲಿ ತಂಡದ ವಿರುದ್ಧ ಸೋಲನುಭವಿಸಿತು.

ADVERTISEMENT

ಭಾರತ ಪುರುಷರ ತಂಡವು 4–6ರಿಂದ ಅಮೆರಿಕ ಶೂಟರ್‌ಗಳ ವಿರುದ್ಧ ಎಡವಿತು. ಭಾರತ ತಂಡದಲ್ಲಿ ಶಾರ್ದೂಲ್ ವಿಹಾನ್‌, ಆರ್ಯ ವಂಶ್ ತ್ಯಾಗಿ ಮತ್ತು ವಿಹಾನ್ ಕಪೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.