ವಾಷಿಂಗ್ಟನ್: ಬಾಲಕಿಯರು, ಮಹಿಳೆಯರ ಕ್ರೀಡೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಭಾಗವಹಿಸುವುದನ್ನು ನಿಷೇಧಿಸಿ ಅಮೆರಿಕ ಸರ್ಕಾರ ಆದೇಶ ಹೊರಡಿಸಿದೆ.
‘ಮಹಿಳಾ ಕ್ರೀಡೆಗಳಲ್ಲಿ ಪುರುಷರಿಗೆ ಅವಕಾಶವಿಲ್ಲ’ ಶೀರ್ಷಿಕೆಯ ಈ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ಸಹಿ ಹಾಕಿದರು. ‘ಈ ಆದೇಶದಿಂದ ಮಹಿಳಾ ಕ್ರೀಡೆಗೆ ಸಂಬಂಧಿಸಿದ ಹೋರಾಟ ಅಂತ್ಯವಾಗಿದೆ’ ಎಂದು ಹೇಳಿದರು.
ಅನೇಕ ಜನಪ್ರತಿನಿಧಿಗಳು, ಮಹಿಳಾ ಕ್ರೀಡಾಪಟುಗಳು, ಮಹಿಳಾ ಕ್ರೀಡೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಭಾಗವಹಿಸುವುದನ್ನು ವಿರೋಧಿಸಿದ್ದರು.
‘ಶಾಲೆಗಳು, ವಿವಿಧ ಅಥ್ಲೆಟಿಕ್ಸ್ ಸಂಸ್ಥೆಗಳು ತಕ್ಷಣದಿಂದ ಈ ಆದೇಶ ಜಾರಿಗೊಳಿಸಬೇಕು’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕ್ಯಾರೊಲಿನ್ ಲೀವಿಟ್ ಹೇಳಿದರು. ಬಾಲಕಿಯರು, ಮಹಿಳೆಯರ ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲೇ ಆದೇಶ ಹೊರಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.