ADVERTISEMENT

ಭಾರತದಲ್ಲಿ ಪ್ರತಿಭೆಗಳು ಅರಳುವ ಸಮಯ

ಖ್ಯಾತ ಟೇಬಲ್‌ ಟೆನಿಸ್‌ ಕೋಚ್‌ ಮೆಕಾಫೀ ಅಭಿಮತ

ಬಸವರಾಜ ದಳವಾಯಿ
Published 1 ನವೆಂಬರ್ 2019, 19:12 IST
Last Updated 1 ನವೆಂಬರ್ 2019, 19:12 IST
ರಿಚರ್ಡ್‌ ಮೆಕಾಫೀ
ರಿಚರ್ಡ್‌ ಮೆಕಾಫೀ   

ಬೆಂಗಳೂರು: ‘ಭಾರತದಲ್ಲಿ ಟೇಬಲ್‌ ಟೆನಿಸ್‌ಗೆ ಸಿಗುತ್ತಿರುವ ಸೌಲಭ್ಯಗಳು ಹಾಗೂ ಆಸಕ್ತಿ ಅಪಾರ.ಈ ಕ್ರೀಡೆಯಲ್ಲಿ ಭಾರತ, ವಿಶ್ವದ ಐದು ಪ್ರಮುಖ ರಾಷ್ಟ್ರಗಳಲ್ಲಿ ಒಂದು ಎನಿಸಿಕೊಳ್ಳುವ ದಿನ ದೂರವಿಲ್ಲ’ ಎಂದು ಅಮೆರಿಕದ ಖ್ಯಾತ ‘ಹಾಲ್ ಆಫ್ ಫೇಮ್’ ಟೇಬಲ್ ಟೆನಿಸ್ ತರಬೇತುದಾರ ರಿಚರ್ಡ್ ಮೆಕಾಫೀ ಅಭಿಪ್ರಾಯಪಟ್ಟರು.

ಬೆಂಗಳೂರಿನ ಚಾಂಪಿಯನ್ಸ್‌ ಟೇಬಲ್‌ ಟೆನಿಸ್‌ ಕೇಂದ್ರವು ಆಯೋ ಜಿಸಿದ್ದ ಶಿಬಿರದಲ್ಲಿ ಪಾಲ್ಗೊಂಡಿದ್ದ ಅವರು ಬುಧವಾರ ಪ್ರಜಾವಾಣಿಯೊಂದಿಗೆ ಮಾತನಾಡಿದರು.

‘ಭಾರತಕ್ಕೆ ಚೀನಾವನ್ನು ಹಿಂದಿ ಕ್ಕಲು ಇನ್ನಷ್ಟು ಸಮಯ ಬೇಕು. 1996ರ ಒಲಿಂಪಿಕ್ ಕ್ರೀಡಾ ಕೂಟದಿಂದ ನಾನು ಗಮನಿಸುತ್ತಿದ್ದೇನೆ.ಕ್ರೀಡೆಗೆ ಮೀಸಲಾಗಿ ಇಡುತ್ತಿರುವ ಅನುದಾನವನ್ನು ಚೀನಾ ದವರುಸಮರ್ಪಕವಾಗಿ ಬಳಸುವ ರೀತಿ ಮಾದರಿಯಾಗಿದೆ. ವ್ಯವಸ್ಥಿತ ಕೋಚಿಂಗ್‌ ಕೂಡ ಅವರ ಬೆಳವಣಿಗೆಗೆ ಅನುಕೂಲವಾಗಿದೆ. ಭಾರತದಲ್ಲಿ ಕ್ರಿಕೆ ಟ್‌ಗೆ ಕೊಟ್ಟಷ್ಟು ಮಹತ್ವವನ್ನು ಅವರು ಅಲ್ಲಿ ಟೇಬಲ್ ಟೆನಿಸ್‌ಗೆ ನೀಡುತ್ತಾರೆ’ ಎಂದರು.

ADVERTISEMENT

‘ಭಾರತದಲ್ಲಿ ಟೇಬಲ್ ಟೆನಿಸ್ ವೇಗವಾಗಿ ಬೆಳೆಯುತ್ತಿದೆ. ರ‍್ಯಾಂಕಿಂಗ್‌ ನಲ್ಲೂ ಇಲ್ಲಿನ ಆಟಗಾರರು ಏರಿಕೆ ಕಾಣುತ್ತಿದ್ದಾರೆ. ಅಚಂತ ಶರತ್‌ ಕಮಲ್‌, ಮಣಿಕಾ ಬಾತ್ರಾ ಅವರಂಥ ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇದರ ಶ್ರೇಯ ಖಂಡಿತ ಭಾರತ ಟೇಬಲ್‌ ಟೆನಿಸ್‌ ಫೆಡರೇಷನ್‌ಗೆ (ಟಿಟಿಎಫ್‌ಐ)ಸಲ್ಲಬೇಕು.ಇಲ್ಲಿನ ತರಬೇತುದಾರರು ಆಟಗಾರರಿಗೆ ಉತ್ತಮ ಮಾರ್ಗದರ್ಶನ ತೋರುತ್ತಿದ್ದಾರೆ’ ಎಂದುಮೆಕಾಫೀ ನುಡಿದರು.

‘ಅಂತರರಾಷ್ಟ್ರೀಯ ಟೇಬಲ್‌ ಟೆನಿಸ್‌ ಫೆಡರೇಷನ್‌ (ಐಟಿಟಿಎಫ್) ಕೂಡ ವಿಶ್ವದಾದ್ಯಂತ ಗುಣಮಟ್ಟದ ತರಬೇತಿಗೆ ಅನುಕೂಲ ಮಾಡಿಕೊಟ್ಟಿದೆ’ ಎಂದು ಅವರು ಮೆಚ್ಚುಗೆ
ವ್ಯಕ್ತಪಡಿಸಿದರು.

‘ಅಲ್ಟಿಮೇಟ್‌ ಟೇಬಲ್‌ ಟೆನಿಸ್‌ನಂಥ (ಯುಟಿಟಿ) ಖಾಸಗಿ ಲೀಗ್‌ಗಳು ಸ್ಥಳೀಯ ಆಟಗಾರರಿಗೆ ತುಂಬಾ ಅನು ಕೂಲವಾಗಿವೆ. ವಿಶ್ವದ ಪ್ರಮುಖ ಎದುರಿಸುವ ಮೂಲಕ ವಿಭಿನ್ನ ಶೈಲಿ ಹೊಸ ತಂತ್ರಗಳನ್ನು ಕಲಿಯಬಹುದು. ಹೊಸ ಅನುಭವಕ್ಕೆ ತೆರೆದುಕೊಳ್ಳಬಹುದು’ ಎಂದು ಮೆಕಾಫೀ ಹೇಳಿದರು.

69 ವರ್ಷದ ಮೆಕಾಫೀ, ಕೋಚ್‌ಗಳಿಗೆ ತರಬೇತಿ ನೀಡುತ್ತಾರೆ. ಕಳೆದ ಎಂಟು ವರ್ಷಗಳಿಂದ ಭಾರತದಲ್ಲಿ ವಿವಿಧ ಶಿಬಿರಗಳು ಹಾಗೂ ಕೋಚಿಂಗ್‌ ಕೇಂದ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಅಕ್ಟೋಬರ್‌ 24ರಿಂದ 30ರವರೆಗೆ ಬೆಂಗಳೂರಿನ ‘ಚಾಂಪಿಯನ್ಸ್‌ ಟೇಬಲ್‌ ಟೆನಿಸ್‌ ಕೇಂದ್ರ’ವುಶಿಬಿರ ನಡೆಸಿತು. ಟೇಬಲ್‌ ಟೆನಿಸ್‌ ಮಾಜಿ ಆಟಗಾರ್ತಿ, ಕೇಂದ್ರದ ನಿರ್ದೇಶಕಿ ಅಂಜನಾ ರಾವ್‌ ಈ ಶಿಬಿರ ಆಯೋಜಿಸಿದ್ದರು. ದೇಶಾದ್ಯಂತ 16 ಆಟಗಾರರು ಇದರಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.