ADVERTISEMENT

ಚಳಿಗಾಲದ ಒಲಿಂಪಿಕ್ಸ್‌ ಬಹಿಷ್ಕಾರಕ್ಕೆ ಕೈಜೋಡಿಸಿದ ಬ್ರಿಟನ್, ಆಸ್ಟ್ರೇಲಿಯಾ

ಪಿಟಿಐ
Published 8 ಡಿಸೆಂಬರ್ 2021, 16:31 IST
Last Updated 8 ಡಿಸೆಂಬರ್ 2021, 16:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್: ಚೀನಾದಲ್ಲಿ ಮುಂದಿನ ವರ್ಷ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕುವ ದೇಶಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.

ಎರಡು ದಿನಗಳ ಹಿಂದೆ ಅಮೆರಿಕ ರಾಜತಾಂತ್ರಿಕ ಬಹಿಷ್ಕಾರ ಹಾಕಿತ್ತು. ಇದೀಗ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕೂಡ ಅಮೆರಿಕದ ಬೆಂಬಲಕ್ಕೆ ನಿಂತಿವೆ. ತಮ್ಮ ದೇಶಗಳ ಸರ್ಕಾರಿ ಅಧಿಕಾರಿಗಳು ಮತ್ತು ಸಚಿವರನ್ನು ಕೂಟದಲ್ಲಿ ಭಾಗವಹಿಸುವ ತಂಡದೊಂದಿಗೆ ಕಳುಹಿಸದಿರಲು ನಿರ್ಧರಿಸಿವೆ.

‘ಚಳಿಗಾಲದ ಒಲಿಂಪಿಕ್ಸ್‌ಗೆ ರಾಜಕೀಯ ಬಹಿಷ್ಕಾರವನ್ನು ಹಾಕುವುದಾಗಿ’ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಹೇಳಿದ್ದಾರೆ.

ADVERTISEMENT

ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದ ಕೃತ್ಯಗಳು ನಡೆಯುತ್ತಿವೆ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ.

ಈಚೆಗೆ ಚೀನಾದ ಟೆನಿಸ್ ತಾರೆ ಪೆಂಗ್ ಶುಯಿ ನಾಪತ್ತೆ ಪ್ರಕರಣವೂ ಸದ್ದು ಮಾಡಿತ್ತು. ಅದರಿಂದಾಗಿ ಅಂತರರಾಷ್ಟ್ರೀಯ ಟೆನಿಸ್ ತಾರೆಯರು ಚೀನಾದ ವಿರುದ್ಧ ದೊಡ್ಡ ಅಭಿಯಾನವನ್ನು ಆರಂಭಿಸಿದ್ದರು. ಆದರೆ, ಕೆಲವು ದಿನಗಳ ಹಿಂದೆ ಪೆಂಗ್ ಒಂದು ಟೆನಿಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವರ ಚಿತ್ರಗಳನ್ನು ಪ್ರಕಟಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.