ADVERTISEMENT

U-17 ಹಾಕಿ ಟೂರ್ನಿ: ವಿದ್ಯಾಶಿಲ್ಪ ಅಕಾಡೆಮಿ, ಚಿನ್ಮಯ ವಿದ್ಯಾಲಯ ಮುಖಾಮುಖಿ

ಸೆಂಟಿನರಿ ಶೀಲ್ಡ್ 17 ವರ್ಷದೊಳಗಿನವರ ಹಾಕಿ ಟೂರ್ನಿ

ಗಿರೀಶದೊಡ್ಡಮನಿ
Published 14 ಆಗಸ್ಟ್ 2025, 0:30 IST
Last Updated 14 ಆಗಸ್ಟ್ 2025, 0:30 IST
<div class="paragraphs"><p>ಹಾಕಿ</p></div>

ಹಾಕಿ

   

ಬೆಂಗಳೂರು: ವಿದ್ಯಾಶಿಲ್ಪ ಅಕಾಡೆಮಿ ಮತ್ತು ಚಿನ್ಮಯ ವಿದ್ಯಾಲಯ ತಂಡಗಳು ಇಲ್ಲಿ ನಡೆಯುತ್ತಿರುವ ಸೆಂಟಿನರಿ ಶೀಲ್ಡ್ 17 ವರ್ಷದೊಳಗಿನವರ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸಿದವು. 

ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ವಿದ್ಯಾಶಿಲ್ಪ ಅಕಾಡೆಮಿಯು 5–1ರಿಂದ ಬಾಲ್ಡ್‌ವಿನ್ ಬಾಲಕರ ಶಾಲೆ ತಂಡದ ವಿರುದ್ಧ ಜಯಭೇರಿ ಬಾರಿಸಿತು. ವಿದ್ಯಾಶಿಲ್ಪ ತಂಡದ ಏಕಾಂಶ್ ಶರ್ಮಾ (6ನಿ), ನಮನ್ ನಾಯರ್ (23ನಿ), ಪ್ರಣಿತ್ ಜಿ ಗಾಡಿಯಾ (36ನಿ) ಹಾಗೂ ಇಶಾಂತ್ ಎ ಗೌಡ (45ನಿ, 48ನಿ) ಅವರು ಗೋಲು ಗಳಿಸಿದರು. ಬಾಲ್ಡ್‌ವಿನ್ ತಂಡದ ರಿಯಾನ್ ಅಂತೋನಿ ಏಕೈಕ ಗೋಲು ದಾಖಲಿಸಿದರು.

ADVERTISEMENT

ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಚಿನ್ಮಯ ವಿದ್ಯಾಲಯವು 5–3 ರಿಂದ ಶೂಟೌಟ್‌ನಲ್ಲಿ ಸೇಂಟ್ ಜೋಸೆಫ್ ಬಾಲಕರ ಪ್ರೌಢಶಾಲೆ ವಿರುದ್ಧ ಜಯ ಗಳಿಸಿತು.  ನಿಗದಿಯ ವೇಳೆಯ ಆಟವು 1–1ರಿಂದ ಸಮವಾಯಿತು. ಚಿನ್ಮಯ ತಂಡದ ಪ್ರಭಾಸ್ (28ನಿ) ಮತ್ತು ಸೇಂಟ್ ಜೋಸೆಫ್ ಶಾಲೆಯ ಸೂರ್ಯ ಸುಬ್ಬಯ್ಯ ಪಾಂಡಂಡ (22ನಿ) ಅವರು ತಲಾ ಒಂದು ಗೋಲು ಹೊಡೆದರು. 

ಶೂಟೌಟ್‌ನಲ್ಲಿ ಚಿನ್ಮಯ ತಂಡದ ಎಂ.ಡಿ. ಗೌಸ್, ಹೇಮಂತ್, ಪ್ರೀತಮ್ ಮತ್ತು ಪ್ರಭಾಸ್ ಗೋಲು ಗಳಿಸಿದರು. ಸೇಂಟ್ ಜೋಸೆಫ್ ತಂಡದ ಬ್ರೇಡನ್ ಜೋಸ್ ಮತ್ತು ಸೂರ್ಯ ಸುಬ್ಬಯ್ಯ ಪಾಂಡಂಡ ತಲಾ ಒಂದು ಗೋಲು ಹೊಡೆದರು. 

14 ವರ್ಷದ ಬಾಲಕರಿಗಾಗಿ ನಡೆಯುತ್ತಿರುವ ಎರಿಕ್ ವಾಝ್ ಸ್ಮಾರಕ ಹಾಕಿ  ಟೂರ್ನಿಯ ಸೆಮಿಫೈನಲ್‌ನಲ್ಲಿ ವಿದ್ಯಾಶಿಲ್ಪ ಅಕಾಡೆಮಿಯು 1–0ಯಿಂದ ಚಿನ್ಮಯ ವಿದ್ಯಾಲಯ ಎದುರು ಗೆದ್ದಿತು. ಅಋಷ್ ಮಲಿಕ್ (26ನೇ ನಿ) ಗೋಲು ಹೊಡೆದರು. ಎರಡನೇ ಸೆಮಿಫೈನಲ್‌ನಲ್ಲಿ ಸೇಂಟ್ ಜೋಸೆಫ್ ತಂಡವು ಶೂಟ್‌ಔಟ್‌ನಲ್ಲಿ ಬಾಲ್ಡ್‌ವಿನ್ ತಂಡದ ವಿರುದ್ಧ 3–2ರಿಂದ ಜಯಿಸಿತು. 

ವಿಜೇತ ತಂಡದ ರಿಯಾನ್ ಇ ವರ್ಗಿಸ್, ಆಡ್ರಿನ್ ನಿತಿನ್ ಮ್ಯಾನ್ಯುವೆಲ್ ಮತ್ತು ದಾಂತ್ ಚಿಟ್ಟಿಯಪ್ಪ ಗೋಲು ಗಳಿಸಿದರು. ಬಾಲ್ಡ್‌ವಿನ್ ಶಾಲೆಯ ರಯಾನ್ ಖಾನ್, ಎನ್. ಧ್ರುವ್ ಸಾಯಿ ಗೋಲು ಗಳಿಸಿದರು. 

ಫೈನಲ್ ಇಂದು 

17 ವರ್ಷದೊಳಗಿನವರು

ವಿದ್ಯಾಶಿಲ್ಪ ಅಕಾಡೆಮಿ–ಚಿನ್ಮಯ ವಿದ್ಯಾಲಯ (ಬೆಳಿಗ್ಗೆ 10.30)

14 ವರ್ಷದೊಳಗಿನವರು

ಸೇಂಟ್ ಜೋಸೆಫ್ ಶಾಲೆ – ವಿದ್ಯಾಶಿಲ್ಪ ಅಕಾಡೆಮಿ  (ಬೆಳಿಗ್ಗೆ 9.30)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.