ADVERTISEMENT

ಹೈಲೊ ಓಪನ್‌: ಉನ್ನತಿ ಅಭಿಯಾನ ಅಂತ್ಯ

ಪಿಟಿಐ
Published 2 ನವೆಂಬರ್ 2025, 15:44 IST
Last Updated 2 ನವೆಂಬರ್ 2025, 15:44 IST
ಉನ್ನತಿ ಹೂಡ
ಉನ್ನತಿ ಹೂಡ   

ಸಾರ್‌ಬ್ರುಕೆನ್ (ಜರ್ಮನಿ): ಭಾರತದ ಉದಯೋನ್ಮುಖ ಆಟಗಾರ್ತಿ ಉನ್ನತಿ ಹೂಡಾ ಅವರು ಹೈಲೊ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಪುತ್ರಿ ಕುಸುಮಾ ವಾರ್ದನಿ ಎದುರು ಪರಾಭವಗೊಂಡರು. ಅದರೊಂದಿಗೆ ಟೂರ್ನಿಯಲ್ಲಿ ಭಾರತದ ಅಭಿಯಾನ ಕೊನೆಗೊಂಡಿತು.

18 ವರ್ಷ ವಯಸ್ಸಿನ ಉನ್ನತಿ ಅವರು ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ 7–21, 13–21ರಿಂದ ನೇರ ಗೇಮ್‌ಗಳಲ್ಲಿ ಇಂಡೊನೇಷ್ಯಾದ ಆಟಗಾರ್ತಿಗೆ ಮಣಿದರು. ಉನ್ನತಿ ಅವರು ಲಯದಲ್ಲಿದ್ದರೂ, ವಾರ್ದನಿ ಅವರ ವೇಗ ಮತ್ತು ನಿಖರತೆಗೆ ಪೈಪೋಟಿ ಒಡ್ಡಲಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT