ADVERTISEMENT

ನಿಗದಿಯಂತೆ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಅಜಯ್‌ ಸಿಂಗ್‌

ಪಿಟಿಐ
Published 17 ಮಾರ್ಚ್ 2025, 22:45 IST
Last Updated 17 ಮಾರ್ಚ್ 2025, 22:45 IST
<div class="paragraphs"><p>ಅಜಯ್‌ ಸಿಂಗ್‌ </p></div>

ಅಜಯ್‌ ಸಿಂಗ್‌

   

ನವದೆಹಲಿ: ಮುಂಬರುವ ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ನಿಗದಿತ ವೇಳಾಪಟ್ಟಿಯ ಪ್ರಕಾರ ನಡೆಯಲಿದೆ ಎಂದು ಬಾಕ್ಸಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾದ (ಬಿಎಫ್‌ಐ) ಅಧ್ಯಕ್ಷ ಅಜಯ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ಈ ಚಾಂಪಿಯನ್‌ಷಿಪ್‌ನ ದಿನಾಂಕವನ್ನು ಪರಿಷ್ಕರಿಸಲಾಗಿದೆ ಎಂದು ಫೆಡರೇಶನ್‌ನ ಕಾರ್ಯದರ್ಶಿ ಹೇಳಿದ ಕೆಲವೇ ಗಂಟೆಗಳಲ್ಲಿ ಅಧ್ಯಕ್ಷರ ಸ್ಪಷ್ಟನೆ ಹೊರಬಿದ್ದಿದೆ. 2024ರ ಕೊನೆಯಿಂದ ಹಲವು ಬಾರಿ ಮುಂದೂಡಿಕೆ ಆಗಿರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಮಾರ್ಚ್ 20ರಿಂದ 27ರವರೆಗೆ ಗ್ರೇಟರ್ ನೊಯ್ಡಾದಲ್ಲಿ ನಡೆಯಬೇಕಾಗಿದೆ.

ADVERTISEMENT

ಬಾಕ್ಸರ್‌ಗಳ ಸಂಖ್ಯೆ ತಿಳಿಸಲು ಮಾರ್ಚ್ 10 ಮತ್ತು ಹೆಸರು ತಿಳಿಸಲು 15 ಕೊನೆಯ ದಿನವಾಗಿತ್ತು. ಫೆಡರೇಷನ್ ಕಾರ್ಯದರ್ಶಿ ಹೇಮಂತ್ ಕಲಿಟ ಅವರು ಭಾನುವಾರ ಸಂಜೆ ಇ-ಮೇಲ್ ಕಳಿಸಿದ್ದು, ಸದಸ್ಯರ ವಿನಂತಿ ಮತ್ತು ಸಮಯದ ಕೊರತೆಯಿಂದ ಟೂರ್ನಿ ಮುಂದೂಡಲಾಗಿದೆ ಎಂದು ತಿಳಿಸಿದ್ದರು. ಕೆಲವು ರಾಜ್ಯಗಳು ಸಂಖ್ಯೆ ಮಾತ್ರ ನಮೂದಿಸಿವೆ. ಕೆಲವು ರಾಜ್ಯಗಳು ಹೆಸರು ಮಾತ್ರ ಕಳುಹಿಸಿವೆ ಎಂದು ಕಲಿಟ ಬರೆದ ಪತ್ರ ಸುದ್ದಿಸಂಸ್ಥೆಗೆ ಲಭ್ಯವಾಗಿದೆ.

ಟೋಕಿಯೊ ಒಲಿಂಪಿಕ್ಸ್‌ ಪದಕ ವಿಜೇತೆ ಲವ್ಲಿನಾ ಬೊರ್ಗೋಹೈನ್, ವಿಶ್ವ ಚಾಂಪಿಯನ್‌ ನೀತು ಗಂಗಾಸ್‌ ಮತ್ತು ಕಾಮನ್‌ವೆಲ್ತ್‌ ಜಾಸ್ಮಿನ್‌ ಲಂಬೋರಿಯಾ ಅವರು ಹೆಸರು ನೀಡಿದ್ದವರಲ್ಲಿ ಪ್ರಮುಖರು. ಬಿಎಫ್‌ಐ, ಈ ರಾಷ್ಟ್ರೀಯ ಕೂಟಕ್ಕೆ 34 ರಾಜ್ಯಗಳಿಂದ ಸಂಖ್ಯೆಯನ್ನು, 25 ರಾಜ್ಯಗಳಿಂದ ಹೆಸರುಗಳನ್ನು ಸ್ವೀಕರಿಸಿದೆ ಎಂದು ಸಿಂಗ್ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.