ವೀನಸ್ ವಿಲಿಯಮ್ಸ್
ನ್ಯೂಯಾರ್ಕ್ : ಅನುಭವಿ ಆಟಗಾರ್ತಿ ವೀನಸ್ ವಿಲಿಯಮ್ಸ್ ಅವರಿಗೆ ಅಮೆರಿಕ ಓಪನ್ ಟೆನಿಸ್ ಟೂರ್ನಿಗೆ ವೈಲ್ಡ್‌ಕಾರ್ಡ್ ಪ್ರವೇಶ ನೀಡಲಾಗಿದೆ.
45 ವರ್ಷದ ವೀನಸ್ ಅವರಿಗೆ ಇದು 25ನೇ ಅಮೆರಿಕ ಓಪನ್ ಟೂರ್ನಿಯಾಗಲಿದೆ. ಈ ಹಿಂದೆ ಅವರು ಈ ಟೂರ್ನಿಯಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದರು. ಅಮೆರಿಕದ ವೀನಸ್ ಅವರು ಮಹಿಳೆಯರ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ವೀನಸ್ ಅವರು ಅನಾರೋಗ್ಯ ದಿಂದಾಗಿ 16 ತಿಂಗಳುಗಳಿಂದ ಟೆನಿಸ್ ಅಂಕಣದಿಂದ ದೂರವಿದ್ದರು. ಹೋದ ತಿಂಗಳು ಅವರು ಡಬ್ಲ್ಯುಟಿಎನಲ್ಲಿ ಆಡಿ ಒಂದು ಪಂದ್ಯ ಜಯಿಸಿದ್ದರು.
ವೈಲ್ಡ್‌ಕಾರ್ಡ್ ಪ್ರವೇಶ ಪಡೆದವರ ಪಟ್ಟಿಯಲ್ಲಿ ವೀನಸ್ ಇದ್ದಾರೆ. ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಅತಿ ಹಿರಿಯ ವಯಸ್ಸಿನ ಆಟಗಾರ್ತಿ ಯಾಗಿದ್ದಾರೆ. ಒಟ್ಟು ಏಳು ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.