ADVERTISEMENT

ವಾಜಪೇಯಿ ಕಪ್‌ ವಾಲಿಬಾಲ್ ಟೂರ್ನಿ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 19:04 IST
Last Updated 23 ಡಿಸೆಂಬರ್ 2021, 19:04 IST

ಬೆಂಗಳೂರು: ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆ ಆಯೋಜಿಸಿರುವ ಪುರುಷರ ಮತ್ತು ಮಹಿಳೆಯರ ಅಖಿಲ ಭಾರತ ದಕ್ಷಿಣ ವಲಯ ವಾಜಪೇಯಿ ಕಪ್‌ ವಾಲಿಬಾಲ್ ಟೂರ್ನಿ ಇದೇ 25ರಿಂದ 29ರ ವರೆಗೆ ಶಂಕರ ಮಠ ಸಮೀಪದ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆಯಲಿದೆ.

ಹೊನಲು ಬೆಳಕಿನಲ್ಲಿ ನಡೆಯಲಿರುವ ಟೂರ್ನಿಯ ಪುರಷರ ವಿಭಾಗದ ವಿಜೇತ ತಂಡಕ್ಕೆ ₹ 40,000 ಮತ್ತು ರನ್ನರ್ ಅಪ್ ತಂಡಕ್ಕೆ ₹ 20,000, ಮೂರನೇ ಸ್ಥಾನ ಗಳಿಸಿದ ತಂಡಕ್ಕೆ ₹ 10,000 ನೀಡಲಾಗುವುದು ಎಂದು ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಎಸ್‌.ಹರೀಶ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಹಿಳಾ ವಿಭಾಗದ ಚಾಂಪಿಯನ್ ತಂಡಕ್ಕೆ ₹ 30,000, ರನ್ನರ್ ಅಪ್‌ ತಂಡಕ್ಕೆ ₹ 20,000, ಮೂರನೇ ಸ್ಥಾನ ಗಳಿಸಿದ ತಂಡಕ್ಕೆ ₹ 10,000 ನೀಡಲಾಗುವುದು. ಪುರುಷರ ವಿಭಾಗದಲ್ಲಿ 8 ತಂಡಗಳು ಮತ್ತು ಮಹಿಳಾ ವಿಭಾಗದಲ್ಲಿ 4 ತಂಡಗಳು ಪಾಲ್ಗೊಳ್ಳಲಿವೆ ಎಂದು ಅವರು ವಿವರಿಸಿದರು.

ADVERTISEMENT

ಪುರುಷರ ವಿಭಾಗ ಮತ್ತು ಮಹಿಳಾ ವಿಭಾಗದ ವಿಜೇತರಿಗೆ ನೀಡುವ ಬಹುಮಾನ ಮೊತ್ತದಲ್ಲಿ ತಾರತಮ್ಯ ಏಕೆ ಎಂದು ವಿಚಾರಿಸಿದಾಗ ‘ಕೆಲವು ರಾಜ್ಯಗಳಲ್ಲಿ ಪುರುಷರಿಗೆ ನೀಡುವ ಮೊತ್ತದ ಅರ್ಧದಷ್ಟು ಮಾತ್ರ ಮಹಿಳಾ ತಂಡಕ್ಕೆ ನೀಡುತ್ತಾರೆ. ನಮ್ಮಲ್ಲಿ 90 ಶೇಕಡಾ ನೀಡುತ್ತೇವೆ. ಭವಿಷ್ಯದಲ್ಲಿ ಏಕರೂಪದ ಮೊತ್ತ ನೀಡಲು ಪ್ರಯತ್ನಿಸಲಾಗುವುದು’ ಎಂದು ಹರೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.