ADVERTISEMENT

ಗಾಲ್ಫ್‌: ಜಂಟಿ ಏಳನೇ ಸ್ಥಾನಕ್ಕೇರಿದ ಮಾದಪ್ಪ

ಪಿಟಿಐ
Published 5 ಅಕ್ಟೋಬರ್ 2018, 15:24 IST
Last Updated 5 ಅಕ್ಟೋಬರ್ 2018, 15:24 IST
ವಿರಾಜ್‌ ಮಾದಪ್ಪ
ವಿರಾಜ್‌ ಮಾದಪ್ಪ   

ಲಿಂಕೌ, ಚೀನಾ ತೈಪೆ: ಭಾರತದ ವಿರಾಜ್‌ ಮಾದಪ್ಪ, ಯೀಂಗ್‌ದರ್‌ ಟೂರ್ನಮೆಂಟ್‌ ಪ್ಲೇಯರ್ಸ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಜಂಟಿ ಏಳನೇ ಸ್ಥಾನಕ್ಕೇರಿದ್ದಾರೆ.

ಏಷ್ಯನ್‌ ಟೂರ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ವಿರಾಜ್‌, ಶುಕ್ರವಾರ ನಡೆದ ಎರಡನೇ ಸುತ್ತಿನ ಪೈಪೋಟಿಯಲ್ಲಿ ಅಮೋಘ ಸಾಮರ್ಥ್ಯ ತೋರಿ ಸ್ಕೋರ್‌ ಹೆಚ್ಚಿಸಿಕೊಂಡರು. ಮೊದಲ ಸುತ್ತಿನ ಅಂತ್ಯಕ್ಕೆ ಅವರು ಜಂಟಿ 80ನೇ ಸ್ಥಾನ ಹೊಂದಿದ್ದರು.

ಜಾನ್‌ ಕ್ಯಾಟ್ಲಿನ್ ಮತ್ತು ಪಾನುಫೋಲ್‌ ಪಿಟ್ಯಾರಾಟ್‌ ಅವರು ಜಂಟಿ ಅಗ್ರಸ್ಥಾನದಲ್ಲಿದ್ದಾರೆ.

ADVERTISEMENT

‘ಮೊದಲ ದಿನ ಹಲವು ತಪ್ಪುಗಳನ್ನು ಮಾಡಿದ್ದರಿಂದ ಹಿನ್ನಡೆ ಎದುರಾಗಿತ್ತು. ಶುಕ್ರವಾರ ಉತ್ತಮ ಸಾಮರ್ಥ್ಯ ತೋರಿ ಏಳನೇ ಸ್ಥಾನಕ್ಕೆ ಏರಿಕೆ ಕಂಡಿದ್ದೇನೆ’ ಎಂದು ವಿರಾಜ್‌ ನುಡಿದಿದ್ದಾರೆ.

ಭಾರತದ ಕರಣ್‌ದೀಪ್‌ ಕೊಚ್ಚಾರ್‌, ರಶೀದ್‌ ಖಾನ್‌ ಮತ್ತು ಖಾಲಿನ್‌ ಜೋಷಿ ಅವರು ಜಂಟಿ 34ನೇ ಸ್ಥಾನಕ್ಕೆ ಪ್ರಗತಿ ಕಂಡಿದ್ದಾರೆ. ಶಿವ ಕಪೂರ್‌ ಮತ್ತು ಎಸ್‌ಎಸ್‌ಪಿ ಚೌರಾಸಿಯಾ ಅವರು ಜಂಟಿ 19ನೇ ಸ್ಥಾನದಲ್ಲಿದ್ದಾರೆ.

ಕರ್ನಾಟಕದ ಎಸ್‌.ಚಿಕ್ಕರಂಗಪ್ಪ ಮತ್ತು ಹಿಮ್ಮತ್‌ ರಾಯ್‌ ಅವರು ಜಂಟಿ 49ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.