ADVERTISEMENT

ಆನ್‌ಲೈನ್‌ ಶೂಟಿಂಗ್‌: ವಿಷ್ಣುಗೆ ಕಂಚು

ಪಿಟಿಐ
Published 29 ನವೆಂಬರ್ 2020, 20:04 IST
Last Updated 29 ನವೆಂಬರ್ 2020, 20:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದ ವಿಷ್ಣು ಶಿವರಾಜ್‌ ಪಾಂಡಿಯನ್‌ ಅವರು ಪ್ರೆಸಿಡೆಂಟ್‌ ಆಫ್‌ ಇಂಡೊನೇಷ್ಯಾ ಓಪನ್‌ಆನ್‌ಲೈನ್ ಶೂಟಿಂಗ್‌ ಟೂರ್ನಿಯ ‘ಚಾಂಪಿಯನ್ಸ್ ಆಫ್‌ ಚಾಂಪಿಯನ್ಸ್‘ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಮಾಜಿ ಶೂಟರ್‌ ಶಿಮೋನ್‌ ಶರೀಫ್‌ ಅವರ ಬಳಿ ತರಬೇತಿ ಪಡೆಯುತ್ತಿರುವ 16 ವರ್ಷದ ವಿಷ್ಣು, ಟೂರ್ನಿಗೆ ಅರ್ಹತೆ ಗಳಿಸಿದ ಭಾರತದ ಏಕೈಕ ಶೂಟರ್‌ ಆಗಿದ್ದರು. 10 ಮೀಟರ್‌ ಏರ್‌ ರೈಫಲ್ಸ್ ವಿಭಾಗದ ಅರ್ಹತಾ ಸುತ್ತಿನಲ್ಲಿ 629.7 ಪಾಯಿಂಟ್ಸ್ ಗಳಿಸಿದ್ದರು.

ಸಿಂಗಪುರದ ಜಸ್‌ಮೈನ್ ಅವರು ಚಿನ್ನ ಹಾಗೂ ಕೊರಿಯಾದ ಕಿಯೋಮ್‌ ಜಿಯೊನ್‌ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.